ಚಾಮರಾಜನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ(ಆರ್‌ಎಸ್ಎಸ್) ನಾಯಕತ್ವ ಪೈಪೋಟಿಯಿಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದರು. ನಗರದಲ್ಲಿ ಮಂಗಳವಾರ 'ರಾಷ್ಟ್ರತಪಸ್ವಿ ಶ್ರೀ ಗುರೂಜಿ' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆರ್‌ಎಸ್‌ಎಸ್ ಶತಮಾನದ ಹೊಸ್ತಿಲಲ್ಲಿದೆ. ಇಷ್ಟು ವರ್ಷಗಳ ಕಾಲ ಸಂಘಟನೆ ವಿಘಟನೆಯಾಗದೇ ಉಳಿದಿರುವುದೇ ನನ್ನಲ್ಲಿ ಕುತೂಹಲ ಹುಟ್ಟಿಸಿದೆ. ಇದಕ್ಕೆ ಸಂಘದಲ್ಲಿ ನಾಯಕತ್ವದ ಪೈಪೋಟಿ ಇಲ್ಲದಿರುವುದು ಮತ್ತು ಸರಸಂಘಚಾಲಕರು ಕೂಡ ಕಾರ್ಯಕರ್ತರಾಗಿಯೇ ದುಡಿಯುವುದು ಕಾರಣ ಎಂದರು.
ಆರ್ಎಸ್ಎಸ್ ನೂರರ ಸಾಮೀಪ್ಯಕ್ಕೆ ಬರುವ ಮುನ್ನ ಹಲವು ಸಂಶಯಗಳಿತ್ತು. ಇನ್ನೂ ಅಧ್ಯಯನ ಮಾಡಬೇಕಿರುವುದರಿಂದ ಈಗಲೂ ಸಂಶಯಗಳಿವೆ. ಆದರೆ ಪೂರ್ವಾಗ್ರಹಗಳಿಲ್ಲ, ಮುಕ್ತ ಮನಸ್ಸಿನಿಂದ ವಿಚಾರಗಳನ್ನು ಗ್ರಹಿಸುತ್ತಿದ್ದೇನೆ.