ಕೊಳ್ಳೇಗಾಲ: ಜಿಲ್ಲೆಗೆ ಅವಶ್ಯಕತೆ ಇರುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ ಎಂಬುವುದು ವಾಸ್ತವ ಎಂದು ಶಾಸಕ ಎನ್. ಮಹೇಶ್ ಹೇಳಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ 24 ಸೋಂಕಿತರ ಸಾವಿನ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, 18 ಮಂದಿ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಶ್ವಾಸಕೋಶದ ಖಾಯಿಲೆಗಳಿಂದ ಬಳಲುತ್ತಿದ್ದರು. ಈ ಪೈಕಿ 17 ಜನ ವೆಂಟಿಲೇಟರ್ನಲ್ಲಿದ್ದರು. ಆಕ್ಸಿಜನ್ ಕೊರೆತೆಯಿಂದ ಯಾರು ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ನನಗನಿಸುತ್ತೆ ಜಿಲ್ಲಾಧಿಕಾರಿ ಕೇಳಿದಷ್ಟು ಆಕ್ಸಿಜನ್ ಸಿಕ್ಕಿಲ್ಲ ಎಂದರು.
ಆಕ್ಸಿಜನ್ ಸರಬರಾಜನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಿ: ಸರ್ಕಾರ ಮೈಸೂರು ಜಿಲ್ಲಾಧಿಕಾರಿ ಮೂಲಕ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಿಸುತ್ತಿದೆ. ಮೈಸೂರಿನಲ್ಲಿ ಕೂಡ ಹೆಚ್ಚು ಕೋವಿಡ್ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆ, ಮೈಸೂರು ಜಿಲ್ಲಾಧಿಕಾರಿ ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಜವಾಬ್ದಾರಿಯನ್ನು ಮೈಸೂರು ಡಿಸಿಗೆ ವಹಿಸಿರುವುದು ಸರಿಯಲ್ಲ. ಆದ್ದರಿಂದ, ನಾನು ಉಸ್ತುವಾರಿ ಸಚಿವರ ಜೊತೆ ಮಾತಾನಾಡಿದ್ದೇನೆ. ಆಕ್ಸಿಜನ್ ಸರಬರಾಜನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಿ ಎಂದು ತಿಳಿಸಿದ್ದೇನೆ ಎಂದು ಎನ್. ಮಹೇಶ್ ತಿಳಿಸಿದರು.
ಇದನ್ನೂಓದಿ: ಚಾಮರಾಜನಗರದಲ್ಲಿ ಭೀಕರ ದುರಂತ: 24 ಗಂಟೆ..24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು
ಈಗಾಲದರೂ ಎಚ್ಚೆತ್ತು ಸಕಾಲದಲ್ಲಿ ಬೆಡ್, ಔಷಧ ಹಾಗೂ ಆಕ್ಸಿಜನ್ ಸಿಗುವಂತೆ ಕ್ರಮ ವಹಿಸಬೇಕು. ಇದು ಮಾಡದೆ ಹೋದರೆ ಸಾವಿನ ಪ್ರಮಾಣ ಹೆಚ್ಚುತ್ತದೆ. ನಾವೆಲ್ಲರೂ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.