ಕೊಳ್ಳೇಗಾಲ:ಮೈಸೂರಿನ ಇಬ್ಬರೂ ಐಎಎಸ್ ಅಧಿಕಾರಿಗಳು ಮಾಧ್ಯಮಗಳಲ್ಲಿ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಡಿಸಿ ರೋಹಿಣಿ ಸಿಂಧೂರಿ ಅಧಿಕ ಪ್ರಸಂಗತನದ ಮಾತುಗಳನ್ನು ಆಡುತ್ತಾರೆ ಎಂದು ಶಾಸಕ ಎನ್. ಮಹೇಶ್ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಅನೇಕ ಸಂದರ್ಭದಲ್ಲಿ ಅಧಿಕ ಪ್ರಸಂಗತನದಿಂದ ಮಾತನಾಡಿದ್ದಾರೆ. ಅಧಿಕಾರಿಗಳು ಮೊದಲು ಅಧಿಕಪ್ರಸಂಗದ ಮಾತುಗಳನ್ನು ಆಡಬಾರದು. ಮಾಧ್ಯಮಗಳ ಮುಂದೆಯೂ ಹೋಗಬಾರದು. ಕೋವಿಡ್ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಮಾಧ್ಯಮಕ್ಕೆ ಹೋಗಲಿ. ಆದರೆ ವೈಯಕ್ತಿಕ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳಲು ಮಾಧ್ಯಮಕ್ಕೆ ಹೋಗಕೂಡದು ಎಂದು ಸಲಹೆ ನೀಡಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ ನಡೆದ ಬಳಿಕ, ಮಾಧ್ಯಮಗಳಲ್ಲಿ ಮೈಸೂರು ಡಿಸಿ ಆರೋಪ ಮುಕ್ತ ಎಂದು ಬಂದಿತ್ತು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಚಾಮರಾಜನಗರದವರೂ ಮೈಸೂರಿನ ಜನರಿಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿಕೆ ನೀಡಿದ್ರು. ಕ್ಷಮೆ ಕೇಳಲಿಕ್ಕೆ ಇವರೇನು ಮೈಸೂರಿನ ಮಹಾರಾಜರೇ? ಎಂದು ಪ್ರಶ್ನಿಸಿದರು.