ಕರ್ನಾಟಕ

karnataka

ETV Bharat / state

ಕೋವಿಡ್ 19 ತಡೆಗೆ 30 ಲೀಟರ್ ಸಾನಿಟೈಸರ್ ನೀಡಿದ ಶಾಸಕ ಎನ್. ಮಹೇಶ್ - ಚಾಮರಾಜನಗರ ಜಿಲ್ಲೆ ಕೊರೊನಾ ವೈರಸ್​ ಪ್ರಕರಣಗಳು

ರಾಜ್ಯದಲ್ಲಿ ಕೊವಿಡ್​​-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎನ್​. ಮಹೇಶ್​ ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರಿಗೆ 30 ಲೀಟರ್ ಸ್ಯಾನಿಟೈಸರ್​ ನೀಡಿದರು.

mla-n-mahesh-gave-30-liter-sanitizer-to-those-who-are-working-hard-kovid-19
ಶಾಸಕ ಎನ್. ಮಹೇಶ್

By

Published : Mar 28, 2020, 9:04 PM IST

ಕೊಳ್ಳೇಗಾಲ: ಕೋವಿಡ್-19 ತಡೆಗೆ ರಾಜ್ಯದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆ ಚಾಮರಾಜನಗರ ಜಿಲ್ಲೆಯಲ್ಲಿ ರೋಗ ಹರಡದಂತೆ ವಿಶೇಷವಾಗಿ ಕಾರ್ಯ ತಂತ್ರ ರೂಪಿಸುತ್ತಿದೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಈ‌ ವಿಚಾರವಾಗಿ ನನಗೆ ತೃಪ್ತಿ ಇದೆ ಎಂದು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ‌ ಎನ್. ಮಹೇಶ್ ತಿಳಿಸಿದ್ದಾರೆ.

ಕೋವಿಡ್ 19 ತಡೆಗೆ 30 ಲೀಟರ್ ಸಾನಿಟೈಸರ್ ನೀಡಿದ ಶಾಸಕ ಎನ್. ಮಹೇಶ್

ಆಸ್ಪತ್ರೆಯಲ್ಲಿ ಕೊರೊನಾ ತಡೆಯುವಲ್ಲಿ ವಹಿಸಿರುವ ಮುನ್ನೆಚ್ಚರಿಕೆ ಕ್ರಮವನ್ನು ಪರಿಶೀಲಿಸಿದರು. ಇದೇ ಸಂಧರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ, ಶುಚಿತ್ವಗಾರರು, ಕಂದಾಯ ಇಲಾಖೆಯ ಸಿಬ್ಬಂದಿ, ಪೌರಕಾರ್ಮಿಕರು, ಚೆಕ್ ಪೋಸ್ಟ್ ಸಿಬ್ಬಂದಿ ಸೇರಿದಂತೆ ಪೊಲೀಸರಿಗೆ ಸಾನಿಟೈಸರ್ ಕೊರತೆ‌ಯಿದೆ ಎಂದು ತಿಳಿದ ಶಾಸಕರು, ಸಿಬ್ಬಂದಿಗಳ ಆರೋಗ್ಯಕ್ಕಾಗಿ 30 ಲೀಟರ್‌ ಸಾನಿಟೈಸರ್ ಅನ್ನು ಸ್ವಂತಿಕೆಯಿಂದ ನೀಡಿದರು.

ಪೌರಕಾರ್ಮಿಕರು ಮತ್ತು ಆಸ್ಪತ್ರೆ ಶುಚಿತ್ವಗಾರರ ಕಾರ್ಯ ಅತ್ಯಂತ ಮಹತ್ವವಾದದ್ದು ಪ್ರತಿಯೊಬ್ಬರು ವೃತ್ತಿಮಾಡುವ ನಡುವೆ ಸಾನಿಟೈಸರ್ ಬಳಸಿ ಕೈ ಸ್ವಚ್ಚ ಮಾಡಿಕೊಳ್ಳಬೇಕು, ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ABOUT THE AUTHOR

...view details