ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ: ಶಿಕ್ಷಣ ಸಚಿವರಿಗೆ ಶಾಸಕ ಎನ್.ಮಹೇಶ್ ಅಭಿನಂದನೆ - MLA N Mahesh

ಕೊರೊನಾ ಸಂದರ್ಭದಲ್ಲಿ ಪೋಷಕರ, ಸಾರ್ವಜನಿಕರ ಕಳವಳಗಳ‌ ನಡುವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ‌ದಿಟ್ಟ ಹೆಜ್ಜೆ ಹಾಕುವ ಮೂಲಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಶಾಸಕ ಎನ್. ಮಹೇಶ್ ಅವರು ಶ್ಲಾಘಿಸಿದರು.

ಶಾಸಕ ಎನ್.ಮಹೇಶ್
ಶಾಸಕ ಎನ್.ಮಹೇಶ್

By

Published : Jul 4, 2020, 2:47 AM IST

ಕೊಳ್ಳೇಗಾಲ: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಹಾಜರಾತಿ ಶೇ 98.5ರಷ್ಟು ಇದ್ದು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 99.9ರಷ್ಟು ಹಾಜರಾತಿ ದಾಖಲಾಗಿದೆ. ಈ ಮೂಲಕ ಕೋವಿಡ್​ 19 ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂದು ಶಾಸಕ ಎನ್. ಮಹೇಶ್ ಪ್ರಶಂಸಿಸಿದರು.

ಶಾಸಕ ಎನ್. ಮಹೇಶ್

ಕೊನೆಯ ಪರೀಕ್ಷೆ ದಿನವಾದ ನಿನ್ನೆ ಕೊಳ್ಳೇಗಾಲ ಕ್ಷೇತ್ರದಲ್ಲಿನ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳಿಗೆ ಅಭಿನಂದನೆ ತಿಳಿಸಿದೆ. ಮನೆಯಲ್ಲೂ ಸಹ ಸಾಮಾಜಿಕ ಅಂತರ, ಸ್ವಚ್ಛತೆ ಕಾಯ್ದುಕೊಳ್ಳುವಂತೆ ಕೆಲವು ಸಲಹೆಗಳನ್ನೂ ನೀಡಿದ್ದೇನೆ ಎಂದರು.

ಕೊರೊನಾ ಸಂದರ್ಭದಲ್ಲಿ ಪೋಷಕರ, ಸಾರ್ವಜನಿಕರ ಕಳವಳಗಳ‌ ನಡುವೆಯೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ‌ದಿಟ್ಟ ಹೆಜ್ಜೆಯ ಮೂಲಕ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ABOUT THE AUTHOR

...view details