ಕೊಳ್ಳೇಗಾಲ:ತಾನು ಓದಿದ ಶಾಲೆಯ ಹೆಚ್ಚುವರಿ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ ಎನ್.ಮಹೇಶ್ ಬಾಲ್ಯವನ್ನು ನೆನೆದ ಪ್ರಸಂಗ ನಗರದಲ್ಲಿ ನಡೆಯಿತು.
ಕೊಳ್ಳೆಗಾಲ ಶಾಸಕ ಎನ್. ಮಹೇಶ್ 1964-65 ರಲ್ಲಿ ಪಟ್ಟಣದಲ್ಲಿರುವ ಹಿರಿಯ ಪ್ರಾರ್ಥಮಿಕ ಟೌನ್ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಪಡೆದಿದ್ದೇನೆ. ನನ್ನೂರು ಶಂಕನಪುರದಿಂದ ದಿನವೂ ನಡೆದುಕೊಂಡೆೇ ಬಂದು ಪಾಠ ಕೇಳುತ್ತಿದೆ. ಇದೀಗ ನಾನು ವ್ಯಾಸಂಗ ಮಾಡಿದ ಶಾಲೆಯ ಉದ್ಘಾಟನೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಶಾಸಕರು ಹೇಳಿದರು.
ನಬಾರ್ಡ್‌ನಲ್ಲಿ 22 ಲಕ್ಷ ರೂ ಮತ್ತು ಹಾಗೂ ಶಿಕ್ಷಣ ಇಲಾಖೆಯ 10.22 ಲಕ್ಷ ರೂ ಅನುದಾನದಲ್ಲಿ ಶಾಲೆಯನ್ನು ಉನ್ನತಿಕರಿಸಲಾಗಿದೆ. ಎರಡು ಹೆಚ್ಚುವರಿ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾನೊಬ್ಬ ಶಾಸಕ ಎಂಬುದಕ್ಕಿಂತ ಹೆಚ್ಚಾಗಿ ಈ ಶಾಲೆಯ ವಿದ್ಯಾರ್ಥಿಯಾಗಿ ಉದ್ಘಾಟನೆ ಕಾರ್ಯಕ್ರಮ ನೇರವರಿಸಿಕೊಟ್ಟಿದ್ದೇನೆ ಎಂದರು.
2019-20 ಸಾಲಿನಲ್ಲಿ 7 ಕೋಟಿ ಅನುದಾನದಡಿ ವಿಧಾನಸಭಾ ವ್ಯಾಪ್ತಿಯಲ್ಲಿರುವ 56 ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಟ್ಟಡ ಕೆಲಸವಾಗಿದ್ದು, ಉದ್ಘಾಟನೆ ಮಾಡಬೇಕಿದೆ. ಕೋವಿಡ್ ಇಲ್ಲದಿದ್ದರೆ ಶಿಕ್ಷಣ ಇಲಾಖೆಗೆ 10 ಕೋಟಿ ರೂ ಅನುದಾನವನ್ನು ಸರ್ಕಾರದಿಂದ ತರುತ್ತಿದ್ದೆ. ಗ್ರಹಚಾರಕ್ಕೆ ಕೊರೊನಾ ಮಹಾಮಾರಿ ಬಂದಿದೆ ಎಂದು ತಿಳಿಸಿದರು.