ಅಂಬೇಡ್ಕರ್ ಜಯಂತಿಯನ್ನು ಮನೆಯಲ್ಲೇ ಆಚರಿಸಿ, ಗೌರವಿಸಿ: ಶಾಸಕ ಎನ್.ಮಹೇಶ್ - ಕೊರೊನಾ ಹಿನ್ನೆಲೆ ದೇಶವೇ ಲಾಕ್ ಡೌನ್
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿ ಕಾನೂನಿಗೆ ಭಂಗ ತರುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಶಾಸಕ ಎನ್.ಮಹೇಶ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಶಾಸಕ ಎನ್. ಮಹೇಶ್
ಕೊಳ್ಳೇಗಾಲ : ಏಪ್ರಿಲ್ 14 ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿದ ದಿನ. ಈ ಬಾರಿ ಕೊರೊನಾ ವೈರಸ್ ಅಬ್ಬರಕ್ಕೆ ದೇಶ ನಡುಗಿದೆ. ಹೀಗಾಗಿ ಅಂಬೇಡ್ಕರ್ ಜನ್ಮದಿನವನ್ನು ಮನೆಯೊಳಗೆ ದೀಪ ಹಚ್ಚಿ, ಸಿಹಿ ತಯಾರಿಸಿ ಸರಳವಾಗಿ ಆಚರಿಸುವಂತೆ ಎಂದು ಶಾಸಕ ಎನ್.ಮಹೇಶ್ ಕರೆ ನೀಡಿದ್ದಾರೆ.