ಕರ್ನಾಟಕ

karnataka

ETV Bharat / state

ಬಿಜೆಪಿ ಫ್ಲೆಕ್ಸ್​ನಲ್ಲಿ ಶಾಸಕ ಮಹೇಶ್ ಫೋಟೋ: ಬಿಜೆಪಿ ವರಿಷ್ಠರೇ ಹಾಕಿಸಿದರಾ ಭಾವಚಿತ್ರ ? - BJP Jana Sevaka Convention in Chamarajanagar

ಚಾಮರಾಜನಗರದಲ್ಲಿ ಬಿಜೆಪಿ ಜನಸೇವಕ ಸಮಾವೇಶ ನಡೆಯುತ್ತಿದ್ದು, ಗಣ್ಯರ ಫ್ಲೆಕ್ಸ್​ನಲ್ಲಿ ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಫೋಟೋ ಹಾಕಲಾಗಿದೆ.

sdd
ಬಿಜೆಪಿ ಫ್ಲೆಕ್ಸ್​ನಲ್ಲಿ ಶಾಸಕ ಮಹೇಶ್ ಫೋಟೋ

By

Published : Jan 11, 2021, 5:21 PM IST

ಚಾಮರಾಜನಗರ: ಬಿಜೆಪಿ ಜನಸೇವಕ ಸಮಾವೇಶ ಇಂದು ನಗರದಲ್ಲಿ ನಡೆಯುತ್ತಿದ್ದು, ಗಣ್ಯರ ಫ್ಲೆಕ್ಸ್​ನಲ್ಲಿ ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಫೋಟೋ ರಾರಾಜಿಸುತ್ತಿದೆ.

ಬಿಜೆಪಿ ಫ್ಲೆಕ್ಸ್​ನಲ್ಲಿ ಶಾಸಕ ಮಹೇಶ್ ಫೋಟೋ

ರಾಷ್ಟ್ರ ಹಾಗೂ ರಾಜ್ಯ ವರಿಷ್ಠರ ಸಾಲಿನಲ್ಲಿ ಕೊಳ್ಳೇಗಾಲ ಶಾಸಕರ ಫೋಟೋ ಇದ್ದು ಕೆಲ ಬಿಜೆಪಿ ನಾಯಕರೇ ಹೇಳಿ ಶಾಸಕ ಮಹೇಶ್ ಅವರ ಫೋಟೋವನ್ನು ಸೇರಿಸಿದ್ದಾರೆ ಎನ್ನಲಾಗಿದೆ. ಸದ್ಯ ಬಿಜೆಪಿ ಸರ್ಕಾರ ಹಾಗೂ ಹಲವು ಸಚಿವರೊಂದಿಗೆ ಮಹೇಶ್ ನಿಕಟ ಸಂಪರ್ಕ ಹೊಂದಿದ್ದು ಸಚಿವ ಸ್ಥಾನ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಕೆಲದಿನಗಳ ಹಿಂದೆಯಷ್ಟೇ ಹೇಳಿದ್ದರು.

ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಹೇಶ್ ಬಿಜೆಪಿ ಸೇರ್ಪಡೆಗೊಂಡು ಜಿಲ್ಲಾ ಉಸ್ತುವಾರಿ ಸಚಿವರಾಗುವ ಹೆಬ್ಬಯಕೆ ಹೊಂದಿದ್ದಾರೆ. ಕಳೆದ ಬಾರಿ ಶಿಕ್ಷಣ ಸಚಿವರಾದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಲು ತೀವ್ರ ಪೈಪೋಟಿ ನಡೆಸಿದ್ದರು.

ABOUT THE AUTHOR

...view details