ಚಾಮರಾಜನಗರ:ತನ್ನ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ವಿ ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆಯಿತು. ನಿವೇಶನದ ಹಕ್ಕು ಪತ್ರ ಸಿಗದೇ ಇದ್ದುದಕ್ಕೆ ಬೇಸರಗೊಂಡ ಕೆಂಪಮ್ಮ ಎಂಬವರು ಏರುಧ್ವನಿಯಲ್ಲಿ ಸಚಿವರನ್ನು ಕೇಳಿದ್ದಾರೆ. ಮಹಿಳೆ ಕಪಾಳಕ್ಕೆ ಹೊಡೆಸಿಕೊಂಡರೂ ಸಚಿವರ ಕಾಲಿಗೆ ಬಿದ್ದು ಸಮಸ್ಯೆ ಹೇಳಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ - ಈಟಿವಿ ಭಾರತ ಕನ್ನಡ
ಸಚಿವ ವಿ ಸೋಮಣ್ಣ ಅವರು ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
![ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ minister-v-somanna-slaps-women-video-viral](https://etvbharatimages.akamaized.net/etvbharat/prod-images/768-512-16725698-thumbnail-3x2-bng.jpg)
ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಲಮೋಕ್ಷ ಮಾಡಿದ ಸಚಿವ ಸೋಮಣ್ಣ
ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ
Last Updated : Oct 23, 2022, 10:28 AM IST