ಕರ್ನಾಟಕ

karnataka

ETV Bharat / state

ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ.. ಎಲ್ಲಾ ಹಿಂದೂಗಳು ಒಳ್ಳೆಯವರಲ್ಲ.. ಸಚಿವ ವಿ.ಸೋಮಣ್ಣ - Minister V. Somanna reacts on The Kashmir Files Movie

ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಪ್ರಧಾನಿ ಮೋದಿ ಅವರ ಚಿಂತನೆಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜಕಾರಣವನ್ನೇ ಹೆಚ್ಚು ನೆಚ್ಚಿಕೊಂಡಿಲ್ಲ. ನನ್ನ ಮಗನ ಹಣೆಬರಹದಲ್ಲಿ ಬ್ರಹ್ಮ ಬರೆದಿದ್ದರೆ, ಎಂಎಲ್ಎ ಆಗುತ್ತಾನೆ, ಇಲ್ಲದಿದ್ದರೇ ಇಲ್ಲ‌‌. ಆದರೆ, ಮೋದಿ ಅವರಂತಹ ನಾಯಕರನ್ನು ಪಡೆದಿದ್ದಕ್ಕೇ ನಾವೆಲ್ಲರೂ ಹೆಮ್ಮೆ ಪಡಬೇಕು..

Minister V. Somanna
ಸಚಿವ ವಿ.ಸೋಮಣ್ಣ

By

Published : Mar 18, 2022, 12:55 PM IST

ಚಾಮರಾಜನಗರ :ಎಲ್ಲಾ ಮುಸ್ಲಿಂರು ಕೆಟ್ಟವರಲ್ಲ.. ಎಲ್ಲಾ ಹಿಂದೂಗಳು ಒಳ್ಳೆಯವರಲ್ಲ ಎಂದು 'ದಿ ಕಾಶ್ಮೀರ್​​ ಫೈಲ್ಸ್'​ ಚಿತ್ರ ವೀಕ್ಷಿಸದವರು ದೇಶದ್ರೋಹಿಗಳು ಎಂಬ ಹೇಳಿಕೆಗೆ ಸಚಿವ ವಿ‌.ಸೋಮಣ್ಣ ಪ್ರತಿಕ್ರಿಯೆ ನೀಡಿದರು.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿರುವುದು..

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಹಿ ಘಟನೆಗಳನ್ನು ಮರೆತು ನಾವೆಲ್ಲ ಒಟ್ಟಾಗಿ ಹೋಗಬೇಕು. ಹಳೆಯ ಘಟನೆಗಳು ಮರುಕಳಿಸಬಾರದು ಎಂದು ಚಿತ್ರ ನಿರ್ಮಾಣ ಮಾಡಲಾಗಿದೆ. ನಾನೂ ಕೂಡ ಮುಸ್ಲಿಮರನ್ನು ಚಲನಚಿತ್ರಗಳಿಗೆ ಕರೆದುಕೊಂಡು ಹೋಗ್ತಾ ಇರ್ತೀನಿ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ ಎಂದರು.

ಇನ್ನು, ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಪ್ರಧಾನಿ ಮೋದಿ ಅವರ ಚಿಂತನೆಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜಕಾರಣವನ್ನೇ ಹೆಚ್ಚು ನೆಚ್ಚಿಕೊಂಡಿಲ್ಲ. ನನ್ನ ಮಗನ ಹಣೆಬರಹದಲ್ಲಿ ಬ್ರಹ್ಮ ಬರೆದಿದ್ದರೆ, ಎಂಎಲ್ಎ ಆಗುತ್ತಾನೆ, ಇಲ್ಲದಿದ್ದರೇ ಇಲ್ಲ‌‌. ಆದರೆ, ಮೋದಿ ಅವರಂತಹ ನಾಯಕರನ್ನು ಪಡೆದಿದ್ದಕ್ಕೇ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.

ಇನ್ನು ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಜಾರಿ ಚಿಂತನೆ ಬಗ್ಗೆ ಪ್ರತಿಕ್ರಿಯಿಸಿ, ನಾನಿನ್ನು ಆ ವಿಚಾರದಲ್ಲಿ ಎಲ್ ಬೋರ್ಡ್. ಈ ಬಗ್ಗೆ ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ:ಆರ್.ಅಶೋಕ್ ಜೊತೆ ಯಾವುದೇ ಸಂಘರ್ಷ ನಡೆದಿಲ್ಲ: ಸಚಿವ ಅಶ್ವತ್ಥ್ ನಾರಾಯಣ

For All Latest Updates

TAGGED:

ABOUT THE AUTHOR

...view details