ಕರ್ನಾಟಕ

karnataka

ETV Bharat / state

ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಟೈಗರ್ ರಿಸರ್ವ್ ಮಾಡಲ್ಲ: ಸಚಿವ ವಿ.ಸೋಮಣ್ಣ - v somann takled about tiger reserve

ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಚಾಮರಾಜನಗರ ಜಿಲ್ಲೆಯ 3ನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಮಾಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

Kn_cnr_02_somanna_av_ka10038
ವಿ.ಸೋಮಣ್ಣ

By

Published : Aug 2, 2022, 8:20 PM IST

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದರು.ಹನೂರು ತಾಲೂಕಿನ‌ ಪೊನ್ನಾಚಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಕಾಡಂಚಿನ ಗ್ರಾಮಗಳಿಗೆ ಅನನುಕೂಲ ಆಗಲಿದೆ. ಯಾವುದೇ ಯೋಜನೆ ಜನರಿಗೆ ಅನುಕೂಲವಾಗಬೇಕೇ ಹೊರತು ತೊಂದರೆಯಾಗಬಾರದು ಎಂದರು.

ಹುಲಿ ಸಂರಕ್ಷಿತ ಪ್ರದೇಶವಾದರೆ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಬರಲು ಕೂಡಾ ಸಮಸ್ಯೆಯಾಗುತ್ತದೆ. ಜಾನುವಾರುಗಳಿಗೂ ತೊಂದರೆಯಾಗಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಅವರೇ ಸಾಕಿದ ಆ ಸಂಘಟನೆಗಳನ್ನು ಅವರೇ ಕಿತ್ತು ಹಾಕಲಿ: ಸಿದ್ದರಾಮಯ್ಯ ಸವಾಲು

ABOUT THE AUTHOR

...view details