ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಕನ್ನಡ ಬಾವುಟ ಹಾರಿಸಿದ ಸಚಿವ ವಿ.ಸೋಮಣ್ಣ: ಉಸ್ತುವಾರಿ ಸ್ಥಾನದ ಮೇಲೆ ಕಣ್ಣು? - ಧ್ವಜಾರೋಹಣ ನೆರವೇರಿಸಿದ ಸಚಿವ ವಿ.ಸೋಮಣ್ಣ

ಸಚಿವ ವಿ.ಸೋಮಣ್ಣ ಜಿಲ್ಲೆಗೆ ಬಂದು ಧ್ವಜಾರೋಹಣ ನೆರವೇರಿಸಿರುವುದು ಬಿಜೆಪಿ ಅಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರಲ್ಲೂ ಹೊಸ ಸಂಚಲನ ಮೂಡಿದೆ. ಕಳೆದ ಬಾರಿ ಜಿಲ್ಲಾ ಪ್ರವಾಸದಲ್ಲಿ ಸೋಮಣ್ಣ ಚಾಮರಾಜನಗರ ಉಸ್ತುವಾರಿ ಒಲ್ಲೆ ಎಂದಿದ್ದರು. ಆದರೆ ಈಗ ಧ್ವಜಾರೋಹಣಕ್ಕೆ ಬಂದಿರುವುದರಿಂದ ಅವರೇ ಉಸ್ತುವಾರಿ ಆಗಲಿದ್ದಾರೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ.

V Somanna inaugurates Kannada rajyotsava programme
ಧ್ವಜಾರೋಹಣ ನೆರವೇರಿಸಿದ ಸಚಿವ ವಿ.ಸೋಮಣ್ಣ

By

Published : Nov 1, 2021, 12:19 PM IST

ಚಾಮರಾಜನಗರ:ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವದಲ್ಲಿ ವಸತಿ ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು‌. ತಾಯಿ‌ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ‌ಮಾಡಿ ಪೂಜೆ ಸಲ್ಲಿಸಿದ ಸಚಿವರು, ಜಿಲ್ಲೆಯ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು.

ಧ್ವಜಾರೋಹಣ ನೆರವೇರಿಸಿದ ಸಚಿವ ವಿ.ಸೋಮಣ್ಣ

ಸಚಿವ ವಿ.ಸೋಮಣ್ಣ ಜಿಲ್ಲೆಗೆ ಬಂದು ಧ್ವಜಾರೋಹಣ ನೆರವೇರಿಸಿರುವುದು ಬಿಜೆಪಿ ಅಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರಲ್ಲೂ ಹೊಸ ಸಂಚಲನ ಮೂಡಿಸಿದೆ. ಕಳೆದ ಬಾರಿ ಜಿಲ್ಲಾ ಪ್ರವಾಸದಲ್ಲಿ ಸೋಮಣ್ಣ ಚಾಮರಾಜನಗರ ಉಸ್ತುವಾರಿ ಒಲ್ಲೆ ಎಂದಿದ್ದರು. ಆದರೆ ಈಗ ಧ್ವಜಾರೋಹಣಕ್ಕೆ ಬಂದಿರುವುದರಿಂದ ಅವರೇ ಉಸ್ತುವಾರಿ ಆಗಲಿದ್ದಾರೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ.

ಬಣ ರಾಜಕೀಯ ಮತ್ತು ಸಂಘಟನೆಯ ವೈಫಲ್ಯದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಮಲದ ದಳ ಮುದುಡಿ ಹೋಗುತ್ತಿದ್ದು, ಇದೀಗ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಸಲುವಾಗಿ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲು ಪಕ್ಷ ಮುಂದಾಗಿರುವ ಬಗ್ಗೆ ಚರ್ಚೆ ಆರಂಭವಾಗಿದೆ.

ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ:ಇದಕ್ಕೆ ಮುನ್ಸೂಚನೆ ಎಂಬಂತೆ ಕನ್ನಡ ರಾಜ್ಯೋತ್ಸವ ಧ್ವಜರೋಹಣಕ್ಕೆ ಅವರನ್ನು ನೇಮಿಸಿ ಕಳುಹಿಸಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಪಕ್ಷ ಅಧಿಕಾರದಲ್ಲಿದ್ದರೂ ಕಾರ್ಯಕರ್ತರು, ಮುಖಂಡರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತಹ ಜಿಲ್ಲಾ ಉಸ್ತುವಾರಿ ಸಚಿವರು ಸಿಗದ ಪರಿಣಾಮ ಜಿಲ್ಲೆಯ ಬಹುತೇಕ ಬಿಜೆಪಿ ಕಾರ್ಯಕರ್ತರು ನಿರಾಶೆಗೊಳಗಾಗಿದ್ದರು.

ಚಾಮರಾಜನಗರ ಜಿಲ್ಲೆಯ ಬಹುತೇಕ ಉಸ್ತುವಾರಿ ಸಚಿವರುಗಳು ಜನಸಾಮಾನ್ಯರು ಮತ್ತು ಕಾರ್ಯಕರ್ತರ ಕೈಗೆ ಸಿಗುತ್ತಿರಲಿಲ್ಲ. ಜಿಲ್ಲೆಯ ಜನತೆಯ ಕೈಗೆ ಸಿಗದ ಬಿಜೆಪಿ ಸರ್ಕಾರದ ಉಸ್ತುವಾರಿ ಸಚಿವರ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗಷ್ಟೇ ಬೇಸರವಿರಲಿಲ್ಲ. ಕಾಂಗ್ರೆಸ್ ಪಕ್ಷದ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಸುರೇಶ್ ಕುಮಾರ್ ಅವರಿಂದ ಜಿಲ್ಲಾಭಿವೃದ್ಧಿ ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ವಿ. ಸೋಮಣ್ಣ ಅವರನ್ನು ನೇಮಕ ಮಾಡಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಆದರೆ, ಸ್ಧಳೀಯ ಬಿಜೆಪಿ ಪ್ರಭಾವಿ ನಾಯಕರಿಗೆ ಇದು ನುಂಗಲಾರದ ತುತ್ತಾಗಿದ್ದು, ವಿ. ಸೋಮಣ್ಣ ಅವರಂತಹ ಪ್ರಭಾವಿ ನಾಯಕರು ಬಂದರೆ ತಮ್ಮ ವರ್ಚಸ್ಸು ಕಡಮೆಯಾಗುತ್ತದೆ ಎಂದು ವರ್ಚಸ್ಸಿಲ್ಲದ ನಾಯಕರನ್ನೇ ಬಯಸುತ್ತಾ ಬಂದಿದ್ದಾರೆ ಎನ್ನಲಾಗ್ತಿದೆ.

ಸ್ಧಳೀಯರು ವರ್ಚಸ್ಸು ಬೆಳೆಸಿಕೊಂಡು ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ವರ್ಚಸ್ಸುಳ್ಳ ನಾಯಕರನ್ನು ಜಿಲ್ಲೆಗೆ ಬರಲು ಬಿಡುತ್ತಿಲ್ಲ. ಇದು ಜಿಲ್ಲಾಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿದ್ದು, ಸೋಮಣ್ಣ ಅವರಂತಹ ಪ್ರಭಾವಿ ನಾಯಕರು ಉಸ್ತುವಾರಿ ವಹಿಸಿಕೊಳ್ಳದಿದ್ದರೆ ಜಿಲ್ಲೆಯಲ್ಲಿ ಪಕ್ಷವೂ ಸಂಘಟನೆಯಾಗುವುದಿಲ್ಲ. ಜತೆಗೆ ಜಿಲ್ಲಾಭಿವೃದ್ದಿಯಾಗುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.

ABOUT THE AUTHOR

...view details