ಚಾಮರಾಜನಗರ:ಮಾಧ್ಯಮಗಳ ಮುಂದೆ ಬಂದು ಚಾಮರಾಜನಗರ ಡಿಸಿ ಹಾಗೂ ಮೈಸೂರು ಡಿಸಿ ಹೇಳಿಕೆ ನೀಡದಂತೆ ಸಚಿವ ಸುರೇಶ್ ಕುಮಾರ್ ತಾಕೀತು ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಸಚಿವರು ಮಾತನಾಡುವ ವೇಳೆ, ಡಿಸಿಗಳ ಆರೋಪ- ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರಿಂದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು, ಅಧಿಕಾರಿಗಳು ಮಾಧ್ಯಮಗಳ ಮುಂದೆ ಆರೋಪ - ಪ್ರತ್ಯಾರೋಪ ಮಾಡಬಾರದು, ಅವರ ಸ್ಪಷ್ಟನೆಗಳನ್ನು ನ್ಯಾಯಮೂರ್ತಿಗಳ ಬಳಿಯೇ ಹೇಳಬೇಕೆಂದು ಹೇಳಿರುವುದಾಗಿ ತಿಳಿಸಿದರು.