ಕೊಳ್ಳೇಗಾಲ:ನಗರದ ಸರ್ಕಾರಿ ಉಪವಿಭಾಗದ ಆಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ದೊರೆಯುತ್ತಿರುವ ವೈದ್ಯಕೀಯ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ಕೋವಿಡ್ ತಪಾಸಣಾ ಕೇಂದ್ರ, ಲಸಿಕಾ ಕೇಂದ್ರ ಹಾಗೂ ಟ್ರಯಾಜ್ ಕೇಂದ್ರಗಳಿಗೆ ಖುದ್ದು ತೆರಳಿದ ಸಚಿವರು ವೀಕ್ಷಿಸಿ ತಪಾಸಣೆಯ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಎಂಸಿಹೆಚ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ 24 ಕಾನ್ಸಟ್ರೇಟರ್ ಹಾಸಿಗೆಗಳನ್ನು ವೀಕ್ಷಣೆ ಮಾಡಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ವೈದ್ಯಕೀಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಲಸಿಕೆ ಕೇಂದ್ರವನ್ನು ಅಗತ್ಯವಿದ್ದರೆ ಯಾವುದಾದರೂ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲು ಚಿಂತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.