ಚಾಮರಾಜನಗರ:ಕೊಳ್ಳೇಗಾಲ ತಾಲೂಕಿನಲ್ಲೊಂದು ಮಾದರಿ ಕೆರೆ ರೂಪಿಸಲು ಯೋಜಿಸಲಾಗಿದ್ದು ಅಧಿವೇಶನದಲ್ಲಿ ಪ್ರಸ್ತಾಪಿಸಿ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊಳ್ಳೇಗಾಲದಲ್ಲಿ ರೈತರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹೊನ್ನೂರು ಕೆರೆ, ಚಿಕ್ಕರಂಗನಾಥ-ದೊಡ್ಡರಂಗನಾಥ ಕೆರೆ ಹಾಗೂ ಪಾಳ್ಯ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಹೂಳು ತೆಗೆದು, ನೀರು ಸರಾಗವಾಗಿ ಕೆರೆ ಸೇರುವಂತೆ ಮಾಡಲಾಗುವುದು ಜೊತೆಗೆ ಒತ್ತುವರಿಯನ್ನು ತೆರವುಗೊಳಿಸಲಿದ್ದು ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಇದೇ 21ರೊಳಗೆ ಸಲ್ಲಿಸಬೇಕೆಂದು ನೀರಾವರಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.