ಕೊಳ್ಳೇಗಾಲ:ಚಾಮರಾಜನಗರ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಚಿವ ಸುರೇಶ್ ಕುಮಾರ್ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮೇಲೆ ಲಾಕ್‌ಡೌನ್ ನಿಯಮ ಉಲ್ಲಂಘನೆ ದೂರನ್ನು ರಾಜ್ಯ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿರುವ ಸಂಬಂಧ ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಲಾಕ್ ಡೌನ್ ಉಲ್ಲಂಘನೆ ಆರೋಪ: ಮಾಹಿತಿಯಿಲ್ಲ ಎಂದ ಸಚಿವ - ದಿನಸಿ ಕಿಟ್ ವಿತರಣೆ
ಸಚಿವ ಸುರೇಶ್ ಕುಮಾರ್ ಇಂದು ಕೊಳ್ಳೇಗಾಲ ಮಾನಸ ಸಂಸ್ಥೆಯ ವತಿಯಿಂದ ಪತ್ರಕರ್ತರಿಗೆ ಹಾಗೂ ವಿತಕರಿಗೆ ದಿನ ನಿತ್ಯ ಬಳಕೆ ಅವಶ್ಯಕತೆಯಿರುವ ದಿನಸಿ ಕಿಟ್ ವಿತರಿಸಿದರು.
ಸುರೇಶ್ ಕುಮಾರ್
ಕೊಳ್ಳೇಗಾಲ ಮಾನಸ ಸಂಸ್ಥೆಯ ವತಿಯಿಂದ ಪತ್ರಕರ್ತರಿಗೆ ಹಾಗೂ ವಿತಕರಿಗೆ ದಿನ ನಿತ್ಯ ಬಳಕೆ ಅವಶ್ಯಕತೆಯಿರುವ ದಿನಸಿ ಕಿಟ್ ವಿತರಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರೈತ ಸಂಘ ನೀಡಿರುವ ದೂರಿನ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಶಾಸಕ ಎನ್. ಮಹೇಶ್, ನಿರಂಜನ್ ಇದ್ದರು.