ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಇಂದು ಬೆಳಗ್ಗೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಬೆಳ್ಳಂಬೆಳಗ್ಗೆ ಸುರೇಶ್ ಕುಮಾರ್ ನಗರ ಪ್ರದಕ್ಷಿಣೆ : ವಿವಿಧ ಕಾಮಗಾರಿ ವೀಕ್ಷಣೆ - Suresh kumar in Chamarajnagara news
ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಇಂದು ಬೆಳಗ್ಗೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
![ಬೆಳ್ಳಂಬೆಳಗ್ಗೆ ಸುರೇಶ್ ಕುಮಾರ್ ನಗರ ಪ್ರದಕ್ಷಿಣೆ : ವಿವಿಧ ಕಾಮಗಾರಿ ವೀಕ್ಷಣೆ](https://etvbharatimages.akamaized.net/etvbharat/prod-images/768-512-4798822-thumbnail-3x2-suresh.jpg)
ಪಾದಯಾತ್ರೆ ಮೂಲಕ ಕೋರ್ಟ್ ರಸ್ತೆ, ಕರಿನಂಜನಪುರ, ತಾಲೂಕು ಕಚೇರಿ, ಜೋಡಿ ರಸ್ತೆಯನ್ನು ವೀಕ್ಷಿಸಿದರು. ಡಿಸಿ, ಎಸ್ಪಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಚಿವಗೆ ಸಾಥ್ ನೀಡಿದರು.
ಇಂದು ಜಿಲ್ಲೆಯಲ್ಲಿ ಒಂದರ ನಂತರ ಒಂದು ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳಲಿದ್ದು, ಬೆಳಗ್ಗೆ 10.45 ಕ್ಕೆ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಆಯುಷ್ಮಾನ್ ಭಾರತ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ 11.30 ಕ್ಕೆ ಗುಂಡ್ಲುಪೇಟೆಯಲ್ಲಿ ಆಯೋಜಿಸಿರುವ ವಾಲ್ಮೀಕಿ ಜಯಂತಿ, ಬಳಿಕ ನರಹಂತಕ ಹುಲಿದಾಳಿಗೆ ಬಲಿಯಾದವರ ಮನೆಗೆ ಭೇಟಿ, ಕೊನೆಯದಾಗಿ ನಗರದ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಐಎಂಎ ಸ್ಟೇಟ್ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.