ಚಾಮರಾಜನಗರ: ಸಂಸದ ವಿ.ಶ್ರೀನಿವಾಸ ಪ್ರಸಾದ್ರನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರೇಳದೆ ಸಚಿವ ಸೋಮಶೇಖರ್ ಟಾಂಗ್ ಕೊಟ್ಟಿದ್ದಾರೆ.
ಪ್ರಸಾದ್ರನ್ನು ರಾಜಕೀಯವಾಗಿ ಮುಗಿಸಲಾಗಲ್ಲ: ಪರೋಕ್ಷವಾಗಿ ಸಿದ್ದರಾಮಯ್ಯಗೆ ಸಚಿವ ಸೋಮಶೇಖರ್ ಟಾಂಗ್ - ಸಂಸದ ವಿ.ಶ್ರೀನಿವಾಸ ಪ್ರಸಾದ್
ಕೆಲವು ಕುತಂತ್ರಿಗಳಿಂದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಚಿವ ಸ್ಥಾನ ಹೋಯಿತು. ಅವರಿಂದ ಸಾಕಷ್ಟು ಲಾಭ ಪಡೆದು ಅವರನ್ನೇ ಸಚಿವ ಸ್ಥಾನದಿಂದ ತೆಗೆದರು ಎಂದು ಸಚಿವ ಎಸ್.ಟಿ.ಸೋಮಶೇಖರ್ ಕುಟುಕಿದ್ದಾರೆ.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಂವಿಧಾನ ಓದು ಪುಸ್ತಕ ವಿತರಣೆಯಲ್ಲಿ ಮಾತನಾಡಿ ಅವರು, ಶ್ರೀನಿವಾಸ್ ಪ್ರಸಾದ್ ಹೆಸರು ಹೇಳಿಕೊಂಡು ಸಾಕಷ್ಟು ಜನ ರಾಜಕೀಯವಾಗಿ ಬೆಳೆದಿದ್ದಾರೆ. ಪ್ರಸಾದ್ ಹೆಸರು ಹೇಳುವವರು ಅವರ ಆದರ್ಶ, ತತ್ವ, ಸಿದ್ಧಾಂತ ಅರಿಯಬೇಕು. ಕಂದಾಯ ಸಚಿವರಾಗಿ ರಾಜ್ಯಾದ್ಯಂತ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಇದೇ ವೇಳೆ ಕೊಳ್ಳೇಗಾಲ ಶಾಸಕ ಮಹೇಶ್ರನ್ನು ಹೊಗಳಿದ ಸಚಿವರು, ಸಂವಿಧಾನ, ಎಲ್ಲಾ ಸಮಯದಾಯ, ಜನರ ಬಗ್ಗೆ ಸದನದಲ್ಲಿ ಅರ್ಥಪೂರ್ಣವಾಗಿ ಮಾತನಾಡುವ ಏಕೈಕ ಶಾಸಕ. ಅವರ ಮಾತು ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ, ಇಡೀ ರಾಜ್ಯಕ್ಕೆ ಸಂಬಂಧಪಟ್ಟದ್ದಾಗಿದೆ. ಸದನದಲ್ಲಿ ಅವರು ಕೈ ಎತ್ತಿದರೆ ಸ್ವೀಕರ್ ಕೂಡ ಅವರಿಗೆ ಮಾತನಾಡಲು ಅವಕಾಶ ಕೊಡುತ್ತಾರೆ ಎಂದರು.