ಕರ್ನಾಟಕ

karnataka

ETV Bharat / state

ನೀ ರಾಜಕಾರಣಿನೇ ಆಗೋದು ಅಂತಿದ್ರು ಮೇಷ್ಟ್ರು.. ಗುರುಗಳನ್ನು ನೆನೆದ ಸಚಿವ ಎಸ್ ಟಿ ಸೋಮಶೇಖರ್.. - ಶಿಕ್ಷಕರ ದಿನಾಚರಣೆ

ಜಿಲ್ಲೆಯ ಉಸ್ತುವಾರಿ ಕೊಟ್ಟಾಗ ಯಾಕಪ್ಪಾ ಎಂದುಕೊಂಡಿದ್ದೆ. ಆದರೆ, ಈಗ ಉಸ್ತುವಾರಿ ವಹಿಸಿಕೊಂಡಿರುವುದು ಸಂತಸ ತಂದಿದೆ. ಕೊರೊನಾ ತಡೆಗೆ ಶ್ರಮಿಸುತ್ತಿರುವೆ. ಶಾಲೆ ಆರಂಭವಾದ ಬಳಿಕ ಶಾಲೆಗಳಿಗೂ ಭೇಟಿ ನೀಡುತ್ತಿರುವೆ. ವಿದ್ಯಾರ್ಥಿಗಳು ಹರ್ಷದಿಂದ ಶಾಲೆಗೆ ಬರುತ್ತಿದ್ದಾರೆ..

Minister Somashekar
ಗುರುಗಳನ್ನು ನೆನೆದ ಸಚಿವ ಸೋಮಶೇಖರ್

By

Published : Sep 5, 2021, 9:42 PM IST

Updated : Sep 5, 2021, 11:01 PM IST

ಚಾಮರಾಜನಗರ :ನಾನು ಲಾಸ್ಟ್ ಬೆಂಚ್ ವಿದ್ಯಾರ್ಥಿ. ಆಗ ನಮ್ಮ ಮೇಷ್ಟ್ರೂ ನೀ ರಾಜಕಾರಣಿ ಆಗ್ತೀಯಾ ಎಂದು ಹೇಳುತ್ತಿದ್ದರು.. ಅಂತಾ ಸಹಕಾರ ಸಚಿವ ಸೋಮಶೇಖರ್ ಅವರು ತಮ್ಮ ಗುರುಗಳನ್ನು ನೆನೆಪಿಸಿಕೊಂಡರು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡ್ತಿರುವುದು..

ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಶ್ನೆಗಳನ್ನು ಕೇಳುವಾಗ ಲಾಸ್ಟ್ ಬೆಂಚಿನಲ್ಲಿರುತ್ತಿದ್ದ ನಾನು ತಲೆ ಬಗ್ಗಿಸಿ ಕುಳಿತುಕೊಂಡು ಬಿಡುತ್ತಿದ್ದೆ. ಆಗ ಮೇಷ್ಟ್ರು ನೀ ಈ ಜನ್ಮದಲ್ಲಿ ಉದ್ಧಾರ ಆಗಲ್ಲ. ನೀನು ಪಕ್ಕಾ ರಾಜಕಾರಣಿನೇ ಆಗೋದು ಎಂದು ಹೇಳುತ್ತಿದ್ದರು.. ಅವರು ಹೇಳಿದಂತೆ ಇಂದು ನಾನು ರಾಜಕೀಯದಲ್ಲಿದ್ದೇನೆ ಎಂದರು.

ಜಿಲ್ಲೆಯ ಉಸ್ತುವಾರಿ ಕೊಟ್ಟಾಗ ಯಾಕಪ್ಪಾ ಎಂದುಕೊಂಡಿದ್ದೆ. ಆದರೆ, ಈಗ ಉಸ್ತುವಾರಿ ವಹಿಸಿಕೊಂಡಿರುವುದು ಸಂತಸ ತಂದಿದೆ. ಕೊರೊನಾ ತಡೆಗೆ ಶ್ರಮಿಸುತ್ತಿರುವೆ. ಶಾಲೆ ಆರಂಭವಾದ ಬಳಿಕ ಶಾಲೆಗಳಿಗೂ ಭೇಟಿ ನೀಡುತ್ತಿರುವೆ. ವಿದ್ಯಾರ್ಥಿಗಳು ಹರ್ಷದಿಂದ ಶಾಲೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಚಾಮರಾಜನಗರಕ್ಕೆ ಬರ್ತೀರಾ ಇಲ್ವಾ ಎಂದು ಸದನದಲ್ಲೇ ಸಿಎಂ ಅವರನ್ನ ಕೇಳ್ತೀನಿ :ನಗರದಲ್ಲಿ ಮಾಧ್ಯಮಗಳೊಂದಿಗೆ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಮೆಡಿಕಲ್ ಕಾಲೇಜಿನ ಆಸ್ಪತ್ರೆ ಉದ್ಘಾಟನೆಗೆ ಬರ್ತೀರಾ ಇಲ್ವಾ ಎಂದು ಸದನದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೇಳುತ್ತೇನೆ. ಅವರು ಬರಲ್ಲ ಎಂದಾಗ ಆಮೇಲೆ ಮಾತನಾಡುತ್ತೇನೆ.

ಶಾಸಕ ಪುಟ್ಟರಂಗಶೆಟ್ಟಿ

ಯಾಕೆಂದರೆ, ಸಚಿವ ಸೋಮಶೇಖರ್ ಸಿಎಂ ಕರೆತರುವ ಭರವಸೆ ಕೊಟ್ಟಿದ್ದಾರೆ. ಸಿಎಂ ಬರದಿದ್ದರೆ ಚಾಮರಾಜನಗರ ಜನರನ್ನೇ ಮರೆಯುತ್ತಿದ್ದಾರೆ ಎಂದರ್ಥ, ಕರ್ನಾಟಕ ಮ್ಯಾಪ್​ನಲ್ಲಿ ಚಾಮರಾಜನಗರ ಇಲ್ವಾ, ಚಾಮರಾಜನಗರ ಪಾಪ ಮಾಡಿದ್ಯಾ ಎಂದು ಆಕ್ರೋಶ ಹೊರ ಹಾಕಿದರು.

ಸಿಎಂ ಕರೆ ತರುವುದನ್ನು ಸವಾಲಾಗಿ ಸ್ವೀಕರಿಸಿದ್ದು, ಅವರೇಕೆ ಬರಲ್ಲ ಎಂದು ಪ್ರಶ್ನೆ ಮಾಡುತ್ತೇನೆ. ಈಗಾಗಲೇ ಚಾಮರಾಜನಗರ ಮೆಡಿಕಲ್ ಕಾಲೇಜಿನ ಆಸ್ಪತ್ರೆ ನಿರ್ಮಾಣವಾಗಿದೆ. ಸಿಎಂ ಇಲ್ಲವೇ ರಾಷ್ಟಪತಿ ಅವರಿಂದಲೇ ಉದ್ಘಾಟನೆ ಮಾಡಿಸಲು ಕಾಯಲಾಗುತ್ತಿದೆ ಎಂದರು.

ಓದಿ: ಈ ವರ್ಷ 5 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಕರ ದಿನದಂದು ಸಿಎಂ ಸಿಹಿಸುದ್ದಿ

Last Updated : Sep 5, 2021, 11:01 PM IST

ABOUT THE AUTHOR

...view details