ಕರ್ನಾಟಕ

karnataka

ETV Bharat / state

ವಸತಿ ಸೌಲಭ್ಯಕ್ಕೆ ಅರ್ಹ ಫಲಾನುಭವಿಗಳ‌ ವಿವರವನ್ನು 15 ದಿನದಲ್ಲಿ ಕೊಡಿ : ಸಚಿವ ವಿ ಸೋಮಣ್ಣ ಸೂಚನೆ - ವಸತಿ ಸೌಲಭ್ಯ ನೀಡುವ ವಿಚಾರವಾಗಿ ಸಭೆ ನಡೆಸಿದ ಸಚಿವರು

ಯೋಜನೆ ಅನುಷ್ಠಾನ ಸಂಬಂಧ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಆದರೆ, ಅಲ್ಲಿಯವರೆಗೂ ಕಾಯದೆ ವಸತಿ ಹಾಗೂ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಈಗಾಗಲೇ ಸೂಚಿಸಿರುವಂತೆ ಜಿಲ್ಲೆಯ ವಿವರವನ್ನು ನೀಡಬೇಕು ಎಂದು ಸೂಚಿಸಿದರು. ಬಡ ಕುಟುಂಬಗಳಿಗೆ ನೆರವಾಗಲು ಅಧಿಕಾರಿಗಳು ಮುಂದಾಗಬೇಕು. ವಸತಿ ಯೋಜನೆ ಸಂಬಂಧ ಕಳುಹಿಸುವ ಪ್ರಸ್ತಾವಗಳಿಗೆ ಕೂಡಲೇ ಒಪ್ಪಿಗೆ ನೀಡಲಾಗುವುದು. ಫಲಾನುಭವಿಗಳನ್ನ ಆಯ್ಕೆ ಮಾಡಿ ಶೀಘ್ರವೇ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು..

Minister Somanna make meeting with officers
ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು

By

Published : Aug 25, 2021, 9:11 PM IST

ಚಾಮರಾಜನಗರ :ವಸತಿ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳ ವಿವರವನ್ನು 15 ದಿನಗಳಲ್ಲಿ ಕೊಡಿ. ನಾನು ಅವರಿಗೆ ವಸತಿ ಯೋಜನೆಯಡಿ ಮನೆಗಳನ್ನ ಮಂಜೂರು ಮಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ಜೊತೆ ಸಭೆ ನಡೆಸಿದ ವಸತಿ ಸಚಿವ ವಿ ಸೋಮಣ್ಣ..

ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಐದು ತಾಲೂಕುಗಳಲ್ಲಿ ವಸತಿಗಾಗಿ ಎಷ್ಟು ಜನ ಅರ್ಹ ಫಲಾನುಭವಿಗಳಿದ್ದಾರೆ. ಎಷ್ಟು ಮಂದಿಯ ಬಳಿ ನಿವೇಶನ ಇದೆ.

ಯಾವ ಪಂಚಾಯತ್ ನಲ್ಲಿ ಸರ್ಕಾರಿ ಭೂಮಿ ಲಭ್ಯವಿದೆ. ಎಷ್ಟು ಫಲಾನುಭವಿಗಳಿಗೆ ಮನೆ ಒದಗಿಸಬಹುದು ಎಂಬ ವಿವರಗಳು ಇನ್ನಿತರ ಮಾಹಿತಿಯನ್ನೊಳಗೊಂಡ ಪಟ್ಟಿಯನ್ನು ಇನ್ನು 15 ದಿನಗಳೊಳಗೆ ಕೊಡಿ, ಬಡವರನ್ನು ಮಾತ್ರ ಆಯ್ಕೆ ಮಾಡಬೇಕು. ಮನೆ ಪಡೆದವರೇ ಮತ್ತೆ ಪಡೆಯುವಂತಾಗಬಾರದು ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ :

ಜಿಲ್ಲೆಯನ್ನು ಗುಡಿಸಲು ರಹಿತವನ್ನಾಗಿಸಲು ಆದ್ಯತೆ ನೀಡಲಾಗುತ್ತದೆ. ನಗರ, ಗ್ರಾಮಾಂತರ ಪ್ರದೇಶಗಳು, ಅಲೆಮಾರಿಗಳು, ಅರೆ ಅಲೆಮಾರಿಗಳು, ಹಾಡಿಗಳು ಸೇರಿದಂತೆ ಇನ್ನಿತರ ಸಮುದಾಯಗಳ ಜನರಿಗೆ ವಸತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು. ಕೇವಲ 21 ತಿಂಗಳ ಅವಕಾಶವಿದ್ದು, ಆದಷ್ಟು ಚಾಮರಾಜನಗರವನ್ನು ಅಭಿವೃದ್ಧಿಗೊಳಿಸಬೇಕು ಎಂದರು.

ವಿವಿಧ ಸೌಲಭ್ಯ ನೀಡಲಾಗುವುದು :

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ, ಬೀದಿದೀಪ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಸೌಲಭ್ಯಗಳನ್ನು ಒದಗಿಸಿ ಮನೆ ನಿರ್ಮಿಸಿ ಕೊಡಲಾಗುವುದು. ಅದೇ ರೀತಿ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಅಂಗನವಾಡಿ, ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ಕೊಡಲಾಗುತ್ತದೆ ಎಂದು ತಿಳಿಸಿದರು.

ಯೋಜನೆ ಅನುಷ್ಠಾನ ಸಂಬಂಧ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಆದರೆ, ಅಲ್ಲಿಯವರೆಗೂ ಕಾಯದೆ ವಸತಿ ಹಾಗೂ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಈಗಾಗಲೇ ಸೂಚಿಸಿರುವಂತೆ ಜಿಲ್ಲೆಯ ವಿವರವನ್ನು ನೀಡಬೇಕು ಎಂದು ಸೂಚಿಸಿದರು.

ಬಡ ಕುಟುಂಬಗಳಿಗೆ ನೆರವಾಗಲು ಅಧಿಕಾರಿಗಳು ಮುಂದಾಗಬೇಕು. ವಸತಿ ಯೋಜನೆ ಸಂಬಂಧ ಕಳುಹಿಸುವ ಪ್ರಸ್ತಾವಗಳಿಗೆ ಕೂಡಲೇ ಒಪ್ಪಿಗೆ ನೀಡಲಾಗುವುದು. ಫಲಾನುಭವಿಗಳನ್ನ ಆಯ್ಕೆ ಮಾಡಿ ಶೀಘ್ರವೇ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಓದಿ: ಇದೇ ಮೊದಲು: ಬೆಂಗಳೂರು ನಗರದಲ್ಲಿ ಕೋವಿಡ್​ನಿಂದ ಸತ್ತವರ ಸಂಖ್ಯೆ ಶೂನ್ಯಕ್ಕಿಳಿಕೆ!

ABOUT THE AUTHOR

...view details