ಚಾಮರಾಜನಗರ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆ ಕಾನೂನು ಸಚಿವ ಮಾಧುಸ್ವಾಮಿ ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ತೇರಿನ ಸೇವೆ ಮಾಡಿಸಿದ್ದಾರೆ.
ಸಿಎಂ ಹುಟ್ಟುಹಬ್ಬ: ಮಾದಪ್ಪನಿಗೆ ಚಿನ್ನದ ತೇರಿನ ಸೇವೆ ಮಾಡಿಸಿದ ಸಚಿವ ಮಾಧುಸ್ವಾಮಿ!
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆ ಕಾನೂನು ಸಚಿವ ಮಾಧುಸ್ವಾಮಿ ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ತೇರಿನ ಸೇವೆ ಮಾಡಿಸಿದ್ದಾರೆ.
ಮಾದಪ್ಪನಿಗೆ ಚಿನ್ನದ ತೇರಿನ ಸೇವೆ ಮಾಡಿಸಿದ ಕಾನೂನು ಸಚಿವ..!
ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಂಜೆ ಪತ್ನಿ ಸಮೇತ ಆಗಮಿಸಿದ ಮಾಧುಸ್ಬಾಮಿ, ಸಿಎಂ ಯಡಿಯೂರಪ್ಪನವರ ದೀರ್ಘಾಯುಷ್ಯಕ್ಕಾಗಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸತ್ತಿಗೆ ಹಿಡಿದು ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾದ ಸಚಿವ ಮಾಧುಸ್ವಾಮಿ ಮತ್ತು ಕುಟುಂಬಸ್ಥರು, ಬಳಿಕ ಬಿಎಸ್ವೈ ಹೆಸರಿನಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.