ಚಾಮರಾಜನಗರ :ಇಂದು ಜಿಲ್ಲಾಡಳಿತ ಭವನದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳ ಕಾರ್ಯ ವೈಖರಿಗೆ ಗರಂ ಆಗಿದ್ದಾರೆ.
ಗ್ರಾಪಂ ಕೆಲಸ ಆಗಬೇಕೆಂದರೂ ಫಾಲೋಅಪ್ ಮಾಡಬೇಕು. ಮುಖ್ಯ ಕಾರ್ಯದರ್ಶಿ ಅವರು ಅಪ್ರೂವಲ್‌ಗಾಗಿ 8 ತಿಂಗಳು ಕಾಲ ಕಾಯುತ್ತಾ ಕುಳಿತರೇ ಹೇಗೆ? ಎಂದು ಪ್ರಶ್ನಿಸಿದರು. ಇದೇ ವೇಳೆ ಸಭೆಗೆ ಗೈರಾಗಿದ್ದ ಕಾರ್ಯಪಾಲಕ ಅಭಿಯಂತರರ ಕುರಿತು ಕೂಡಲೇ ಅವರಿಗೆ ನೋಟಿಸ್ ಕೊಡಿ, ಮಿನಿಸ್ಟರ್ ಬಂದ್ರೂ ಅಧಿಕಾರಿಗಳು ಬರದಿದ್ದರೆ ಹೇಗೆ? ಎಂದು ಡಿಸಿಗೆ ಸೂಚಿಸಿದರು.
ದೇವಾಲಯಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಯೋಗ ಅತ್ಯಗತ್ಯ. ಸಮಿತಿಗಳನ್ನು ಮಾಡಿಕೊಂಡು ಭಕ್ತಾದಿಗಳ ಸಹಕಾರ ಪಡೆದು, ಅಭಿವೃದ್ಧಿಗೊಳಿಸಬೇಕು. ಎಲ್ಲವನ್ನು ಸರ್ಕಾರವೇ ಮಾಡಲಾಗಲ್ಲ. ಖಾಸಗಿ ಟ್ರಸ್ಟ್‌ಗಳು ನಡೆಸುವ ದೇಗುಲಗಳು ಅಭಿವೃದ್ಧಿಯಾಗುತ್ತಿಲ್ಲವೇ?. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಆದಾಯದ ದಾರಿ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.