ಕರ್ನಾಟಕ

karnataka

ETV Bharat / state

ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಸಚಿವ ಕತ್ತಿ: ರೈಲ್ವೆ ಕಂಬಿ ಬದಲು ರೋಪ್ ವೇ ಅಳವಡಿಕೆಗೆ ಚಿಂತನೆ - ಲ್ವೆ ಕಂಬಿ ಬದಲು ರೋಪ್ ವೇ ಅಳವಡಿಕೆಗೆ ಚಿಂತನೆ

ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಶನಿವಾರ ವಾಸ್ತವ್ಯ ಹೂಡಿದ್ದ ಸಚಿವ ಉಮೇಶ್​ ಕತ್ತಿ, ಭಾನುವಾರ ಕಾಡು ಸುತ್ತಿದರು. ಅಲ್ಲದೇ ಮಾನವ ವನ್ಯಜೀವಿ ಸಂಘರ್ಷ ತಡೆಗೆ ರೈಲು ಕಂಬಿಗಳ ಕೊರತೆ ಹಿನ್ನೆಲೆ ಬೇಲಿಗಳನ್ನು ಅಳವಡಿಸಲು ಚಿಂತಿಸಿರುವುದಾಗಿ ತಿಳಿದುಬಂದಿದೆ.

ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಸಚಿವ ಕತ್ತಿ
ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಸಚಿವ ಕತ್ತಿ

By

Published : Jun 19, 2022, 9:27 PM IST

ಚಾಮರಾಜನಗರ:ಅರಣ್ಯ ಸಚಿವ ಉಮೇಶ್ ಕತ್ತಿ ಭಾನುವಾರ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡು ಕಾಡು ಸುತ್ತಿದರು. ಜೊತೆಗೆ, ಅಧಿಕಾರಿಗಳೊಂದಿಗೆ ಸಭೆಯನ್ನು ಸಹ ನಡೆಸಿದರು. ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಶನಿವಾರ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ವನ್ಯಜೀವಿ ಸಫಾರಿ ನಡೆಸಿದರು. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ರೈಲು ಕಂಬಿಗಳ ಕೊರತೆ ಹಿನ್ನೆಲೆ ಬೇಲಿಗಳನ್ನು ಅಳವಡಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.

ಸಚಿವರ ಖಾಸಗಿ ಭೇಟಿ ಇದಲ್ಲದಿದ್ದರೂ ಮಾಧ್ಯಮದಿಂದ ಅಂತರ ಏಕೆ ಕಾಯ್ದುಕೊಂಡರು ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ಕೂಡ ಈ ಸಂಬಂಧ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಕಳೆದ ಎರಡು ಬಾರಿ ಭೇಟಿ ನೀಡಿದ ವೇಳೆ ಅವರು ಅತ್ಯಾಚಾರ, ಪಡಿತರ ವಿತರಣೆ ಹಾಗೂ ಬೆಳಗಾವಿ ವಿಭಜನೆ ಕುರಿತು ನೀಡಿದ್ದ ಹೇಳಿಕೆಗಳು ಸದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಸಚಿವ ಕತ್ತಿ

ಏಡುಕುಂಡಲು ಎತ್ತಂಗಡಿ ಮಾಡದಂತೆ ಮನವಿ: ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತರು ಕೆ.ಗುಡಿಯಲ್ಲಿ ಸಚಿವರನ್ನು ಭೇಟಿಯಾಗಿ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳು ಮತ್ತು ಬಿಳಿಗಿರಿರಂಗನ ಬೆಟ್ಟದ ಪುರಾಣಿ ಪೋಡು ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿದರು‌‌. ಇದರೊಟ್ಟಿಗೆ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಡಿಸಿಎಫ್ ಏಡುಕುಂಡಲು ಅವರನ್ನು ಮೂರು ವರ್ಷಗಳವರೆಗೆ ವರ್ಗಾವಣೆ ಮಾಡದೇ ಜಿಲ್ಲೆಯಲ್ಲೇ ಉಳಿಸಿಕೊಳ್ಳಬೇಕು. ಚಂಗಡಿ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು‌‌.

ಇದನ್ನೂ ಓದಿ:ಅರಣ್ಯ ಇಲಾಖೆ ವಿನೂತನ ಪ್ರಯತ್ನ.. ವನ ಮತ್ತು ಜನ ಸಂಪರ್ಕಕ್ಕೆ ಬಂತು ಸಾರಿಗೆ ವಾಹನ

ಇದಕ್ಕೆ ಸಚಿವರು ಮಾತನಾಡಿ, ಚಂಗಡಿ ಸ್ಥಳಾಂತರದ ಬಗ್ಗೆ ಗುರುವಾರದಂದು ವಿಧಾನಸೌಧಕ್ಕೆ ಬನ್ನಿ ಅಲ್ಲೇ ಕೆಲಸ ಮಾಡಿಕೊಡುತ್ತೇನೆ. ಅಲ್ಲದೇ ಡಿಸಿಎಫ್​ರನ್ನು ಮುಂದುವರೆಸುವ ಭರವಸೆ ಕೊಟ್ಟಿದ್ದಾರಂತೆ.

ABOUT THE AUTHOR

...view details