ಚಾಮರಾಜನಗರ :ಹಾಸಿಗೆಗಳಿಲ್ಲದೇ ಸಾಲು ಸಾಲಾಗಿ ಗರ್ಭಿಣಿಯರು ನೆಲದ ಮೇಲೆ ಮಲಗಿದ್ದ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಬಂದ ಸಚಿವರಿಗೆ ಹೆರಿಗೆ ವಿಭಾಗ ಮುಂಭಾಗದಲ್ಲಿ ಸಾಲುಸಾಲಾಗಿ ಮಲಗಿದ್ದ ಗರ್ಭಿಣಿಯರ ನರಕ ದರ್ಶನವಾಯಿತು. ಬೆಳಗ್ಗೆಯಿಂದಲೂ ಇದೇ ರೀತಿ ಮಲಗಿರುವುದಾಗಿ ಗರ್ಭಿಣಿಯರ ಸಂಬಂಧಿಕರು ಸಚಿವರೆದುರು ಅಳಲು ತೋಡಿಕೊಂಡರು. ಹಾಸಿಗೆಗಳಿಲ್ಲ, ಶೌಚಾಲಯ ಸ್ಥಿತಿ ಅಯೋಮಯ. ಬಡವರು ಬರುವ ಸರ್ಕಾರಿ ಆಸ್ಪತ್ರೆಗೆ ಹೇಳೋರು ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಆಸ್ಪತ್ರೆ ವಾತಾವರಣ ಕಂಡು ವೈದ್ಯರ ವಿರುದ್ಧ ಗರಂ ಆದ ಸಚಿವರು ಉತ್ತಮ ಗಾಳಿ- ಬೆಳಕಿನ ವ್ಯವಸ್ಥೆ ಮಾಡಬೇಕು. ಛಾವಣಿಯನ್ನು ಎತ್ತರಗೊಳಿಸಿ ಫ್ಯಾನ್ ಅಳವಡಿಸಿ, ನೆಲಹಾಸಿಗೆ ಗ್ರಾನೈಟ್ ಹಾಕಿಸಿ ಬರುವವರು ಕುಳಿತುಕೊಳ್ಳಲು ಕುರ್ಚಿಗಳನ್ನು ಇನ್ನು 15 ದಿನಗಳಲ್ಲಿ ಮಾಡಬೇಕೆಂದು ಸೂಚಿಸಿದರು.