ಚಾಮರಾಜನಗರ:ಬೆಳೆಹಾನಿ ವೀಕ್ಷಣೆ ವೇಳೆ ಸಚಿವ ದೇಶಪಾಂಡೆ ಅವರು ಎಳನೀರು ಮೇಲಿನ ಪ್ರೀತಿಯನ್ನು ತೋರ್ಪಡಿಸಿ, ಆರೋಗ್ಯದ ಗುಟ್ಟನ್ನೂ ಹೇಳಿದರು.
ತೆಂಗು ಸವಿದ ಸಚಿವರು... ಆರೋಗ್ಯದ ಪಾಠ ಮಾಡಿದ್ರು! - chamarajanagar
ಬೆಳೆಹಾನಿ ವೀಕ್ಷಣೆ ವೇಳೆ ರೈತರೊಬ್ಬರ ಜಮೀನಿಗೆ ಭೇಟಿ ನೀಡಿದ ಸಚಿವ ದೇಶಪಾಂಡೆ ಎಳನೀರು ಕುಡಿದು, ಕೊಬ್ಬರಿ ಸವಿಯುವ ವೇಳೆ ತೆಂಗಿನ ತಿರುಳು ಆರೋಗ್ಯಕರ ಎಂದು ಬಣ್ಣಿಸಿದರು.
ಬೆಳೆಹಾನಿ ವೀಕ್ಷಣೆ ವೇಳೆ ಸಚಿವರ ಎಳನೀರು ಪ್ರೀತಿ!
ಬದನಗುಪ್ಪೆಯ ಬಿ.ಪಿ.ನಾಗರಾಜಮೂರ್ತಿ ಅವರ ಜಮೀನಿಗೆ ಭೇಟಿ ನೀಡಿದ ವೇಳೆ ಎಳನೀರು ಪಡೆದ ಸಚಿವರು ಕೊಕೊನೆಟ್ ಈಸ್ ಹೆಲ್ದಿ, ಕಾಯಿ ತೆಗೆದುಕೊಡಿ ಎಂದು ಕೇಳಿ ತೆಂಗಿನಕಾಯಿ ತಿರುಳು ತಿಂದರು.
ಡಿಸಿ ಅವರಿಗೆ ಎಳನೀರು ನೀಡಿದ ವೇಳೆ ತೆಂಗಿನಕಾಯಿ ಹೆಲ್ತ್ಗೆ ಒಳ್ಳೇದು ಎಂದು ಬಣ್ಣಿಸಿದರು. ಬಳಿಕ, ಅಧಿಕಾರಿಗಳ ಸಭೆ ನಡೆಸಲು ಜಿಲ್ಲಾಡಳಿತ ಭವನಕ್ಕೆ ತೆರಳುವ ವೇಳೆ ಕಾರಿನಲ್ಲೇ ತೆಂಗಿನಕಾಯಿ ಮೆಲ್ಲುತ್ತಾ ಸಾಗಿದರು.