ಕರ್ನಾಟಕ

karnataka

ETV Bharat / state

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ತರಾಟೆ - ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಚಿವ ಬಿ.ಸಿ.ಪಾಟೀಲ್ ಭೇಟಿ,

ಚಾಮರಾಜನಗರದಲ್ಲಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ ವಿಜ್ಞಾನಿಗಳು, ಅಧಿಕಾರಿಗಳ ಕಾರ್ಯವೈಖರಿಗೆ ಗರಂ‌ ಆದರು.

minister-bc-patil-chamarajanagar-tour
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ತರಾಟೆ

By

Published : Jan 24, 2021, 4:49 PM IST

Updated : Jan 24, 2021, 5:03 PM IST

ಚಾಮರಾಜನಗರ:ಎರಡನೇ ದಿನದ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಬಿ.ಸಿ. ಪಾಟೀಲ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ವಿಜ್ಞಾನಿಗಳು, ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ತರಾಟೆ

ಶನಿವಾರ ರೈತರ ಸಂವಾದದಲ್ಲಿ, ಕಲ್ಲಂಗಡಿಗೆ ರೋಗ ಬಾಧಿಸುತ್ತಿದ್ದು ವಿಜ್ಞಾನಿಗಳು, ತೋಟಗಾರಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ರೈತರ ದೂರನ್ನು ತಿಳಿಸಿ ಕೆವಿಕೆ ವಿಜ್ಞಾನಿಗಳಿಗೆ ಕ್ಲಾಸ್ ತೆಗೆದುಕೊಂಡರು. ವಿಜ್ಞಾನಿಗಳು, ಅಧಿಕಾರಿಗಳ ಕಾರ್ಯವೈಖರಿಗೆ ಗರಂ‌ ಆದರು.

ಜಿಲ್ಲೆಗಳಲ್ಲಿ ಕೃಷಿ ಕೇಂದ್ರ ಹಾಗೂ ಕಾಲೇಜು ತೆಗೆಯುವುದು ಕೇವಲ ತರಗತಿ ನಡೆಸಿ ಒಂದಷ್ಟು ಜನರಿಗೆ ನೌಕರಿ ನೀಡುವುದಕ್ಕಲ್ಲ. ಆ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಂಶೋಧನೆ ಮಾಡಿ ಅವರ ಸಮಸ್ಯೆ ಬಗೆ ಹರಿಸುವುದಕ್ಕೆ ಎಂಬುದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ರೈತರು ತಿಳಿದುಕೊಂಡಿರುವಷ್ಟು ಮಾಹಿತಿ ಯಾರಿಗೂ ಇರುವುದಿಲ್ಲ. ಕಲ್ಲಂಗಡಿಗೆ ಬಾಧಿಸುತ್ತಿರುವ ರೋಗಕ್ಕೆ ಇನ್ನೂ ಔಷಧಿ ಸಿಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

Last Updated : Jan 24, 2021, 5:03 PM IST

For All Latest Updates

TAGGED:

ABOUT THE AUTHOR

...view details