ಕರ್ನಾಟಕ

karnataka

ETV Bharat / state

ತಲೆಗೆ ಬ್ಯಾಟರಿ ಕಟ್ಟಿಕೊಂಡು ಜೋಳಕ್ಕೆ ನುಗ್ಗಿದ ಆನೆ ಓಡಿಸಿದರಂತೆ ಅಪ್ಪು: 'ಗಂಧದಗುಡಿ' ಅನುಭವ ಬಿಚ್ಚಿಟ್ಟ ಮಿಲ್ಟ್ರಿ ಮಾದೇವ - ಮಿಲ್ಟ್ರಿ ಮಾದೇವ

ಅಪ್ಪು ಅಭಿಮಾನಿಳು ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗ ಎದುರು ನೋಡುತ್ತಿರುವ 'ಗಂಧದಗುಡಿ' ಚಿತ್ರದಲ್ಲಿ ಪುನೀತ್ ಜೊತೆ ದಿನಗಟ್ಟಲೇ ಹೆಜ್ಜೆ ಹಾಕಿ, ಕಾಡಿನ ವಿವಿಧ ಮಜಲನ್ನು ಪರಿಚಯಿಸಿದ್ದ ಅರಣ್ಯ ವೀಕ್ಷಕ ಮಾದೇವ ಅವರು ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Miltri Madeva
ಮಿಲ್ಟ್ರಿ ಮಾದೇವ

By

Published : Aug 3, 2022, 11:05 AM IST

Updated : Aug 3, 2022, 12:10 PM IST

ಚಾಮರಾಜನಗರ: ಮಿಲ್ಟ್ರಿ ಮಾದೇವ ಅಂದ್ರೆ ಸಾಮಾನ್ಯ ಜನರಿಗಿಂತ ಅರಣ್ಯ ಇಲಾಖೆಗೆ ಹಾಗೂ ಕಾಡಿನ ಜೊತೆ ನಂಟಿದ್ದವರಿಗೆ‌ ಚಿರಪರಿಚಿತ ಹೆಸರು. ಕಾನನದ ಜ್ಞಾನವನ್ನು ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಉಣ ಬಡಿಸಿದ ಕುರಿತು ಈಟಿವಿ ಭಾರತದೊಂದಿಗೆ ಬಿಆರ್​ಟಿ ಹುಲಿ‌ ಸಂರಕ್ಷಿತ ಪ್ರದೇಶದ ಅರಣ್ಯ ವೀಕ್ಷಕ ಮಾದೇವ ಅಲಿಯಾಸ್ ಮಾಡಿ ಮಿಲ್ಟ್ರಿ ಮಾದೇವ ಅಭಿಪ್ರಾಯ ಹಂಚಿಕೊಂಡಿದ್ದಾರೆ.

15 ದಿನದಲ್ಲಿ ಚಿರತೆ, ಕಾಟಿ, ಆನೆ‌ ದರ್ಶನ: ಸರಿಸುಮಾರು 15 ದಿನ ಅಪ್ಪು ಜೊತೆಗಿದ್ದು, ಅವರನ್ನ ಜೋಡಿಗೆರೆ, ರಾಗಿಕಲ್ಲುಮಡು, ಭೂತಮಡು, ಮಾರಿಮಡು ಅರಣ್ಯ ಪ್ರದೇಶಗಳಿಗೆ ಕರೆದೊಯ್ದು ತೋರಿಸಿದ್ದೇನೆ. ಚಿರತೆ , ಕಾಟಿ, ಆನೆ ಹಿಂಡನ್ನು ನೋಡಬೇಕೆಂದರು ತೋರಿಸಿದೆ.‌ ಆನೆಯೊಂದು ಜೋಳದ ಹೊಲಕ್ಕೆ ನುಗ್ಗಿ ಫಸಲು ನಾಶ ಮಾಡುವಾಗ ಮಧ್ಯರಾತ್ರಿ ಪುನೀತ್ ಮತ್ತು ನಾವು ತಲೆಗೆ ಬ್ಯಾಟರಿ ಹಾಕಿಕೊಂಡು ಆನೆ ಓಡಿಸಿದ್ದೇವೆ, ಅವೆಲ್ಲಾ ಮರೆಯಲಾಗದ ನೆನಪುಗಳು ಎಂದರು.

'ಗಂಧದಗುಡಿ' ಸಿನಿಮಾದ ಅನುಭವ ಬಿಚ್ಚಿಟ್ಟ ಮಿಲ್ಟ್ರಿ ಮಾದೇವ

ಅಪ್ಪು ಅವರಿಗೆ ಕಳ್ಳಬೇಟೆ ತಡೆ‌ ಶಿಬಿರದಲ್ಲಿ‌ ಬೆಲ್ಲದ ಟೀ ಮಾಡಿಕೊಟ್ಟಿದ್ದೇವೆ, ಜೊತೆಗೆ ಕಡಲೆಬೀಜ ಹುರಿದು ಕೊಟ್ಟಿರುವುದಾಗಿ ಹೇಳಿದ ಮಿಲ್ಟ್ರಿ ಮಾದೇವ, ಪುನೀತ್ ರಾಜ್​ಕುಮಾರ್​​ ನನ್ನನ್ನು ಸರ್ ಎಂದು ಕರೆಯಬೇಡಿ ಎಂದಿದ್ದರು. ಬಳಿಕ ಅಣ್ಣಾ ಎಂದು ಕರೆಯಲು ಶುರು ಮಾಡಿದೆ, ಅದಕ್ಕೂ ಒಮ್ಮೊಮ್ಮೆ ತಕರಾರು ತೆಗೆದು ನನ್ನ ಕಾಡಿನ ಜ್ಞಾನ ಹೊಗಳಿದ್ದರು ಎಂದರು.

ಸಿನಿಮಾದಲ್ಲಿ ಕಂಡಿದ್ದ ಅಪ್ಪು ಅವರು ಎದುರಿಗೆ ಬಂದು ನಿಂತಾಗ ತುಂಬಾ ಖುಷಿಯಾಯಿತು. ಅವರೊಟ್ಟಿಗೆ ಫೋಟೋ ತೆಗೆಸಿಕೊಂಡೆ, ಸಿನಿಮಾಗಾಗಿ ಕಾಯುತ್ತಿದ್ದು, ನೋಡುತ್ತೇನೆ ಎಂದು ಮಿಲ್ಟ್ರಿ ಮಾದೇವ ಹೇಳಿದ್ದಾರೆ.

ಇದನ್ನೂ ಓದಿ:ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..

Last Updated : Aug 3, 2022, 12:10 PM IST

ABOUT THE AUTHOR

...view details