ಚಾಮರಾಜನಗರ: ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳು ಮತೀಯ ಸಂಘರ್ಷವನ್ನು ಉಂಟು ಮಾಡುತ್ತಿವೆ ಎಂದು ಆರೋಪಿಸಿ ಅಜಾದ್ ಹಿಂದೂ ಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಅಂದಾಜು ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧಿಸುವಂತೆ ಆಗ್ರಹಪಡಿಸಿದರು.
ಕಳೆದ ಜು.3 ರಂದು ನಗರದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ಜಾರ್ಖಂಡ್ನಲ್ಲಿ ಅಲ್ಪಸಂಖ್ಯಾತನ ಹತ್ಯೆ ಖಂಡಿಸಿ ಪ್ರತಿಭಟಿಸುವ ವೇಳೆ ಬಿಜೆಪಿ, ಆರ್ ಎಸ್ ಎಸ್, ಭಜರಂಗದಳ, ಎಬಿವಿಪಿ ಸಂಘಟನೆ ವಿರುದ್ಧ ಮನಬಂದಂತೆ ಮಾತಾನಾಡಿ, ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಮೂಲಕ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ಕಳೆದ ಸರ್ಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಕಾರ್ಯಕರ್ತರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದರಿಂದ ಎರಡನ್ನೂ ನಿಷೇಧಿಸಬೇಕೆಂದು ವರದಿ ನೀಡಿತ್ತು.
ಆದರೆ, ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲವಾದ್ದರಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಂಘಟನೆಗಳು ನಿಷೇಧಿಸುವಂತೆ ಮನವಿ ನೀಡುತ್ತಿದ್ದೇವೆ ಎಂದು ಅಜಾದ್ ಹಿಂದೂ ಸೇನೆ ಅಧ್ಯಕ್ಷ ಪೃಥ್ವಿರಾಜ್ ಎಚ್ಚರಿಕೆ ನೀಡಿದರು.