ಕರ್ನಾಟಕ

karnataka

ETV Bharat / state

ಚಾಮರಾಜನಗರ: ಮೆಣಸಿನಕಾಯಿ ಬೆಳೆ ನಡುವೆ ಮತ್ತೇರಿಸುವ ಗಾಂಜಾ! - marijuana farming in chamrajnagar

ಮೆಣಸಿನಕಾಯಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ಚಾಮರಾಜನಗರ ಜಿಲ್ಲೆ ರಾಮಾಪುರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

marijuana farming between chilli  farming land
ರಾಮಾಪುರ ಪೊಲೀಸರ ಕಾರ್ಯಾಚರಣೆ

By

Published : Jan 2, 2021, 8:01 PM IST

ಚಾಮರಾಜನಗರ: ಹನೂರು ತಾಲೂಕಿನ ಅಂಚಿಪಾಳ್ಯ ಗ್ರಾಮದ ಜಮೀನೊಂದರಲ್ಲಿ ಮೆಣಸಿನಕಾಯಿ ಫಸಲಿನ ನಡುವೆ ಮತ್ತೇರಿಸುವ ಗಾಂಜಾ ಬೆಳೆದಿರುವುದು ಕಂಡು ಬಂದಿದೆ.

ಖಚಿತ ಮಾಹಿತಿ ಮೇರೆಗೆ, ಅಂಚಿಪಾಳ್ಯ ಗ್ರಾಮದಲ್ಲಿ ರಾಜೇಂದ್ರನ್@ಅರ್ಜುನ್ ಎಂಬಾತ ತನ್ನ ಜಮೀನಿನ ಮೆಣಸಿನಕಾಯಿ ಫಸಲಿನ ಮಧ್ಯೆ ಬೆಳೆದಿದ್ದ 6 ಗಾಂಜಾ ಗಿಡಗಳನ್ನು ರಾಮಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ವೇಳೆ 9 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಇವು 15 ಕೆ.ಜಿ ತೂಕ ಹೊಂದಿವೆ.

ಪೊಲೀಸರು ದಾಳಿ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ರಾಜೇಂದ್ರನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ರಾಮಾಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒದಿ: ಕೊಳ್ಳೇಗಾಲ: ಆಸ್ಪತ್ರೆಗೆಂದು‌‌ ಬಂದ ಗೃಹಿಣಿ ಮಗುವಿನೊಂದಿಗೆ ನಾಪತ್ತೆ!

ABOUT THE AUTHOR

...view details