ಕರ್ನಾಟಕ

karnataka

ETV Bharat / state

ಚಾಮರಾಜನಗರ: ಅಂತ್ಯಸಂಸ್ಕಾರ ಮುಗಿಸಿ ಮರಳುವಾಗ ಹೆಜ್ಜೇನು ದಾಳಿ, 10 ಮಂದಿ ವೃದ್ಧರಿಗೆ ಗಾಯ - ಹೆಜ್ಜೇನು ದಾಳಿ

ಹೆಜ್ಜೇನು ದಾಳಿಯಿಂದ ಹಲವರು ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.

ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ
ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ

By ETV Bharat Karnataka Team

Published : Sep 22, 2023, 10:23 AM IST

Updated : Sep 22, 2023, 1:26 PM IST

ಚಾಮರಾಜನಗರ: ಹೆಜ್ಜೇನು ದಾಳಿ ನಡೆಸಿ 10 ಮಂದಿ ವೃದ್ಧರು ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಬಿ.ಗುಂಡಾಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಗುಂಡಾಪುರ ಗ್ರಾಮದಲ್ಲಿ ನಿಧನ ಹೊಂದಿದ್ದ ದೊಡ್ಡಮಲ್ಲಯ್ಯ ಎಂಬವರ ಶವಸಂಸ್ಕಾರ ಮುಗಿಸಿ ಹಿಂತಿರುಗುವಾಗ ಹೆಜ್ಜೇನುಗಳು ಜನರ ಮೇಲೆರಗಿದ್ದವು.

ಗಾಯಗೊಂಡವರಲ್ಲಿ ಎಲ್ಲರೂ ವೃದ್ಧರಾಗಿದ್ದಾರೆ. ಕಾಮಗೆರೆಯ ಆಸ್ಪತ್ರೆಯ ಐಸಿಯುನಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಳು ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಮೂರು ದಿನಗಳ ಹಿಂದೆಯೂ ನಡೆದಿತ್ತು ದಾಳಿ:ಕೊಂಗರಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ಶವಸಂಸ್ಕಾರಕ್ಕೆ ತೆರಳಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಚೆನ್ನಪ್ಪ(60) ಎಂಬವರು ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೊಂಗರಹಳ್ಳಿ ಗ್ರಾಮದ ಮೂಡಲ ಬೀದಿಯ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ ಶವಕ್ಕೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನುಗಳು ಸುಮಾರು 15 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ಮಾಡಿದ್ದವು. ಚೆನ್ನಪ್ಪ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದರು.

ಇದನ್ನೂ ಓದಿ: ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದಾಗ ಹೆಜ್ಜೇನು ದಾಳಿ, ಓರ್ವ ಸಾವು: 14 ಮಂದಿ ಆಸ್ಪತ್ರೆಗೆ ದಾಖಲು

ಕೆಲ ತಿಂಗಳ ಹಿಂದೆ ಮೈಸೂರಲ್ಲಿ ಹೆಜ್ಜೇನು ದಾಳಿ: ಹೆಚ್​ ಡಿ ಕೋಟೆ ತಾಲೂಕಿನ ಹೊಸತೊರವಳ್ಳಿ ಹಾಗೂ ಬೆಳಗನಹಳ್ಳಿ ಗ್ರಾಮದ ಹೊರವಲಯದಲ್ಲಿ ದನ ಮೇಯಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ಪರಿಣಾಮವಾಗಿ ಓರ್ವ ರೈತ ಮೃತಪಟ್ಟು, ಮತ್ತಿಬ್ಬರು ಅಸ್ವಸ್ಥರಾಗಿದ್ದರು.

ಹೆಜ್ಜೇನು ದಾಳಿಗೆ ಚಿಕ್ಕಮಾಲೇಗೌಡನ (65) ಬಲಿಯಾಗಿದ್ದರು. ಗಾಯಗೊಂಡಿದ್ದ ಬೀರೇಗೌಡ ಮತ್ತು ಶಂಕರನಾಯ್ಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Last Updated : Sep 22, 2023, 1:26 PM IST

ABOUT THE AUTHOR

...view details