ಚಾಮರಾಜನಗರ:ಡಿಸ್ಕವರಿ ಚಾನೆಲ್ನಲ್ಲಿ ಮೂಡಿ ಬರುತ್ತಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಸೂಪರ್ಸ್ಟಾರ್ ರಜಿನಿಕಾಂತ್ ಅವರ ಎರಡನೇ ಪ್ರೋಮೊ ಬಿಡುಗಡೆಯಾಗಿದೆ.
ಮ್ಯಾನ್ ವರ್ಸಸ್ ವೈಲ್ಡ್ ಎರಡನೇ ಪ್ರೋಮೊ ಔಟ್... ಸಾಹಸ ವೀರನಿಗೆ ಎದುರಾಯ್ತು ಹುಲಿ, ಆನೆ! - Man vs Wild With Rajinikanth Second Promo,
ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸುತ್ತಿರುವ ಮ್ಯಾನ್ ವರ್ಸಸ್ ವೈಲ್ಡ್ನ ಎರಡನೇ ಪ್ರೋಮೊ ಬಿಡುಗಡೆಯಾಗಿದ್ದು, ಸಾಹಸ ವೀರನಿಗೆ ಕಾಡು ಪ್ರಾಣಿಗಳು ಎದುರಾದ ಕ್ಷಣಗಳನ್ನು ನೋಡಬಹುದಾಗಿದೆ.
ಮ್ಯಾನ್ ವರ್ಸಸ್ ವೈಲ್ಡ್ ಎರಡನೇ ಪ್ರೊಮೊ ಔಟ್
ಬೇಸ್ ಬಾಲ್ ಕ್ಯಾಪ್, ಜಾಕೆಟ್ ತೊಟ್ಟಿರುವ ರಜಿನಿಕಾಂತ್ ಅವರಿಗೆ ಹುಲಿ, ಆನೆ, ಜಿಂಕೆಗಳು ಎದುರಾದ ದೃಶ್ಯಗಳು ಪ್ರೋಮೊದಲ್ಲಿದ್ದು, ಗುಡ್ಡವೊಂದನ್ನು ಹತ್ತುವ ದೃಶ್ಯ ಕೂಡ ಇದೆ. ಜೀಪು, ನಡೆದಾಟ, ಬ್ರಿಡ್ಜ್ ಬಳಿಕ ಕೆರೆಯೊಂದನ್ನು ದಾಟುವ ದೃಶ್ಯವಿದೆ. ಸ್ಟೈಲಾಗಿ ಕೂಲಿಂಗ್ ಗ್ಲಾಸನ್ನು ರಜಿನಿ ಏರಿಸಿಕೊಳ್ಳುವುದು ಗಮನ ಸೆಳೆಯುತ್ತಿದೆ.
ಜನವರಿ 28 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಅರಣ್ಯ ವಲಯದಲ್ಲಿ ನಡೆದ ಚಿತ್ರೀಕರಣದಲ್ಲಿ ರಜನಿ ಪಾಲ್ಗೊಂಡಿದ್ದರು. ಇದೇ ಮಾ.23 ರ ರಾತ್ರಿ 8ಕ್ಕೆ ಈ ವಿಶೇಷ ಸಂಚಿಕೆ ಪ್ರಸಾರಗೊಳ್ಳುತ್ತಿದೆ.