ಬಂಡೀಪುರ ಆಯ್ಕೆ ಮಾಡಿಕೊಂಡಿದ್ದೇ ತಲೈವಾ: ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಏನೇನಿರಲಿದೆ? - ಬಂಡೀಪುರದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ
ಡಿಸ್ಕವರಿ ಚಾನೆಲ್ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿ ಕಾಡು ಸುತ್ತಲಿದ್ದು, ಈಗಾಗಲೇ ತಲೈವಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.

ರಜಿನಿಕಾಂತ್ , ಬೇರ್ ಗ್ರಿಲ್ಸ್
ಚಾಮರಾಜನಗರ:ಡಿಸ್ಕವರಿ ಚಾನೆಲ್ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿ ಕಾಡು ಸುತ್ತಲಿದ್ದು, ಈಗಾಗಲೇ ತಲೈವಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.
ಬಂಡೀಪುರದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ
ಇನ್ನು, ಈ ಬಾರಿಯ ಮ್ಯಾನ್ ವರ್ಸಸ್ ವೈಲ್ಡ್ ಸಂಚಿಕೆಯಲ್ಲಿ ಕಾಡು, ಅರಣ್ಯದ ರಮ್ಯತೆಯ ಬಗ್ಗೆ ತೋರಿಸುವ ಜೊತೆಗೆ ಕಾಡನ್ನು ಬೆಂಕಿಯಿಂದ, ಕಳ್ಳರಿಂದ ರಕ್ಷಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದ ಮೇಲೂ ಬೆಳಕು ಚೆಲ್ಲಲಾಗುತ್ತೆ ಎಂದು ಮೂಲಗಳು ತಿಳಿಸಿವೆ. ಡ್ರೋಣ್ ಕ್ಯಾಮರಾದ ಮೂಲಕ ಕಾಡಾನೆಗಳು, ಹುಲಿಗಳ ಚಿನ್ನಾಟ, ಚಿರತೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಬೆಂಕಿ ರೇಖೆ ನಿರ್ಮಾಣ ಮಾಡಿರುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಅಕ್ಷಯ್ ಕುಮಾರ್ ಕೂಡ ಗ್ರಿಲ್ಸ್ ಜೊತೆ ಕಾಡು ಸುತ್ತಲಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ ವರ್ಸಸ್ ವೈಲ್ಡ್ ಮೂಲಕ ಬಂಡೀಪುರ ಮತ್ತಷ್ಟು ಪ್ರಸಿದ್ಧಿ ಹೊಂದಿ ದೇಶ-ವಿದೇಶದ ಗಮನ ಸೆಳೆಯಲಿದೆ ಎಂದೇ ಹೇಳಲಾಗುತ್ತಿದೆ.