ಕರ್ನಾಟಕ

karnataka

ETV Bharat / state

ಮಗನಿಗೆ ಕೊರೊನಾ ಬಂತೆಂದು ಜನರ ಚುಚ್ಚುಮಾತು: ಮನನೊಂದು ತಂದೆ ಆತ್ಮಹತ್ಯೆ..! - Man suicide at Gundlupete Somahalli

ಅಕ್ಕಪಕ್ಕದ ಮನೆಯವರ ಚುಚ್ಚು ಮಾತಿನಿಂದ ಮನನೊಂದು ವ್ಯಕ್ತಿಯೊಬ್ಬರು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ನಡೆದಿದೆ. ಮಗನಿಗೆ ಕೊರೊನಾ ತಗುಲಿದ್ದಕ್ಕೆ ಅಕ್ಕಪಕ್ಕದ ಮನೆಯವರ ಚುಚ್ಚು ಮಾತಿನಿಂದ ಬೇಸತ್ತ ವ್ಯಕ್ತಿ ಬಾರದ ಲೋಕಕ್ಕೆ ತೆರಳಿದ್ದಾರೆ.

Man suicides in Chamarajanagar
ಚಾಮರಾಜನಗರದಲ್ಲಿ ವ್ಯಕ್ತಿ ಆತ್ಮಹತ್ಯೆ

By

Published : Aug 11, 2020, 12:16 PM IST

ಚಾಮರಾಜನಗರ: ಮಗನಿಗೆ ಕೊರೊನಾ ಬಂತೆಂದು ಜನರಾಡಿದ ಚುಚ್ಚು ಮಾತುಗಳಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ನಡೆದಿದೆ.

ಮಹದೇವನಾಯ್ಕ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಳೆದ ಶನಿವಾರ ಅವರ ಮಗ ಬೆಂಗಳೂರಿನಿಂದ ಗ್ರಾಮಕ್ಕೆ ಹಿಂತಿರುಗಿದ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ, ಸೋಂಕಿತ ವ್ಯಕ್ತಿಯದ್ದು ಸೇರಿದಂತೆ ಸುತ್ತಮುತ್ತಲಿನ 4-5 ಮನೆಗಳನ್ನು ಕಂಟೇನ್​ಮೆಂಟ್ ​ವಲಯವೆಂದು ಗುರುತಿಸಲಾಗಿತ್ತು. ಕಂಟೇನ್​ಮೆಂಟ್​ ವಲಯ ಮಾಡಿದ್ದರಿಂದ ಹೊರಗಡೆ ತಿರುಗಾಡಲು ಆಗುತ್ತಿಲ್ಲ. ಬಹಿರ್ದೆಸೆಗೆ ಹೋಗಲಾಗುತ್ತಿಲ್ಲ. ನಿಮ್ಮ ಮಗನಿಂದಲೇ ಹೀಗಾಯಿತು ಎಂದು ಅಕ್ಕ ಪಕ್ಕದವರು ಚುಚ್ಚುಮಾತು ಆಡಿದ್ದಾರೆ. ಇದರಿಂದ ಮನನೊಂದ ಮಹಾದೇವನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಮಹದೇವನಾಯ್ಕ ಅವರ ಮಗ

ಬೆರಳೆಣಿಕೆಯ ಸಂಬಂಧಿಕರು ಸೇರಿ ಮೃತ ವ್ಯಕ್ತಿಯ ಶವ ಸಂಸ್ಕಾರ ನಡೆಸಿದರು. ಕ್ವಾರಂಟೈನ್​ನಲ್ಲಿರುವ ಸೋಂಕಿತ ಮಗ ಬಂದು ತಂದೆ ಮುಖ ನೋಡಿ ಮತ್ತೆ ಆಸ್ಪತ್ರೆಗೆ ವಾಪಸಾಗಿದ್ದಾನೆ. ಗ್ರಾಮಸ್ಥರ ನಿಂದನೆಯಿಂದಲೇ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ನ್ಯಾಯ ಸಿಗಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದಾನೆ.

ABOUT THE AUTHOR

...view details