ಚಾಮರಾಜನಗರ: ಒಂದೇ ಮನೆಯ ಮೂವರಿಗೆ ವ್ಯಕ್ತಿವೋರ್ವ ಚಾಕು ಇರಿದು ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ಸಂಜೆ ನಡೆದಿದೆ.
ಒಂದೇ ಮನೆಯ ಮೂವರ ಹೊಟ್ಟೆಗೆ ಇರಿದು ವ್ಯಕ್ತಿ ಪರಾರಿ - ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ಮೂವರ ಮೇಲೆ ಹಲ್ಲೆ
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮೂವರ ಹೊಟ್ಟೆಗೆ ಚಾಕು ಇರಿದಿದ್ದಾನೆ. ಇನ್ನು ಆರೋಪಿ ಪರಾರಿಯಾಗಿದ್ದು, ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ವೈಯಕ್ತಿಕ ದ್ವೇಷ, ಒಂದೇ ಮನೆಯ ಮೂವರ ಹೊಟ್ಟೆಗೆ ಇರಿದು ಪರಾರಿಯಾದ ವ್ಯಕ್ತಿ
ಗ್ರಾಮದ ಶಿವಣ್ಣ(28), ಮಹಾದೇವಯ್ಯ(55) ಹಾಗೂ ಕುಮಾರ್(30) ಎಂಬುವರಿಗೆ ಅದೇ ಗ್ರಾಮದ ಪ್ರಜ್ವಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಮೂವರ ಹೊಟ್ಟೆ, ಎದೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ಬೇಗೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಹಳೇ ದ್ವೇಷದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮಕ್ಕೆ ಪೊಲೀಸರು ತೆರಳಿದ್ದಾರೆ.