ಕರ್ನಾಟಕ

karnataka

ETV Bharat / state

ಬಾಡಿಗೆ‌ ಕೊಡುವ ನೆಪದಲ್ಲಿ ಮಾಲೀಕನಿಗೆ‌ ಚಾಕುವಿನಿಂದ ಇರಿದು ಹಲ್ಲೆ - ಬಾಡಿಗೆದಾರನಿಂದ ಮಾಲೀಕನ ಮೇಲೆ ಹಲ್ಲೆ

ಬಾಡಿಗೆ ಕೊಡುವ ನೆಪದಲ್ಲಿ ಬಂದು ಅಂಗಡಿ ಮಾಲೀಕನಿಗೆ ಬಾಡಿಗೆದಾರನೋರ್ವ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

kollegala
ಚಾಕುವಿನಿಂದ ಇರಿತಕ್ಕೊಳಗಾದ ಮಾಲೀಕ

By

Published : Apr 6, 2021, 7:42 AM IST

ಕೊಳ್ಳೇಗಾಲ: ಬಾಡಿಗೆ ಕೊಡುವ ನೆಪದಲ್ಲಿ ಬಂದು ಅಂಗಡಿ ಮಾಲೀಕನಿಗೆ ಬಾಡಿಗೆದಾರ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಚಾಕುವಿನಿಂದ ಇರಿತಕ್ಕೊಳಗಾದ ಮಾಲೀಕ

ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಕೆ.ಎನ್.ಕೆ ಮ್ಯಾನ್‌ಶನ್ ಕಟ್ಟಡದ ಮಾಲೀಕ ನಾಗೇಂದ್ರ ಗುಪ್ತ ಹಲ್ಲೆಗೊಳಗಾದ ವ್ಯಕ್ತಿ. ದೇವಾಂಗ ಪೇಟೆಯ‌ ನಿವಾಸಿಯಾದ ಎಸ್.ಎಲ್.ಆರ್ ಟೆಲಿಕಾಮ್ ಮೊಬೈಲ್ ಅಂಗಡಿ ಮಾಲೀಕ ಮಂಜುನಾಥ್ ಚಾಕು‌ವಿನಿಂದ ಹಲ್ಲೆ ಮಾಡಿ ಪರಾರಿಯಾದ ಆರೋಪಿ.

ಕಳೆದ ಆರು ತಿಂಗಳ ಹಿಂದೆ ನಾಗೇಂದ್ರ ‌ಗುಪ್ತ ಅಂಗಡಿ ಬಾಡಿಗೆಯನ್ನು ಹೆಚ್ಚಾಗಿ ಕೊಡುವಂತೆ ಬಾಡಿಗೆದಾರ ಮಂಜುನಾಥ್​ಗೆ ತಿಳಿಸಿದ್ದರಂತೆ. ಇದಕ್ಕೆ ಆರೋಪಿಯು ಒಪ್ಪಿಕೊಂಡಿದ್ದ. ಆದರೆ ಪ್ರತಿ ತಿಂಗಳಂತೆ ಬಾಡಿಗೆ ನೀಡುವ ನೆಪದಲ್ಲಿ ಮಾಲೀಕನ‌ ಮನೆಯೊಳಗೆ‌ ನುಗ್ಗಿ ಏಕಾಏಕಿ ನಾಗೇಂದ್ರ ಗುಪ್ತನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ನಾಗೇಂದ್ರ ಕೂಗಿಕೊಂಡಾಗ ಅಕ್ಕಪಕ್ಕದ ಜನರು ಬರುವಷ್ಟರಲ್ಲಿ ಚಾಕುವನ್ನು ಹೊಟ್ಟೆಯಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳುವನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಗಾಯಾಳುವನ್ನು ಭೇಟಿ ಮಾಡಿ ಕೃತ್ಯದ ಮಾಹಿತಿ ಕಲೆಹಾಕಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details