ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆ್ಯಕ್ಸಿಜನ್ ದುರಂತದ ತನಿಖಾಧಿಕಾರಿಯಾಗಿರುವ KSRTC MD ಶಿವಯೋಗಿ ಕಳಸದ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆ ಪರಿಶೀಲಿಸುತ್ತಿರುವ ಶಿವಯೋಗಿ ಕಳಸದ್ ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾಧಿಕಾರಿ ಜೊತೆ ಸಮಾಲೋಚಿಸಿ ಆಕ್ಸಿಜನ್ ಪ್ಲಾಂಟ್ ಹಾಗೂ ಸಿಲಿಂಡರ್ ದಾಸ್ತಾನಿನ ಕೊಠಡಿಗೆ ತೆರಳಿ ವೀಕ್ಷಿಸಿದರು. ಬಳಿಕ ಹೊರರೋಗಿಗಳ ಚೀಟಿ ಪಡೆಯುತ್ತಿದ್ದ ರೋಗಿಗಳು, ಕೋವಿಡ್ ಟೆಸ್ಟ್ ಮಾಡಿಸಲು ಬಂದವರ ಜತೆ ಅವರ ಊರು, ಯಾವ ಕಾರಣಕ್ಕಾಗಿ ಬಂದಿರುವುದು, ಜಿಲ್ಲಾಸ್ಪತ್ರೆ ಸೇವೆ ಹೀಗೆ ಹಲವು ಮಾಹಿತಿ ಪಡೆದರು. ಬಳಿಕ ಡಿಸಿ, ಡಿಎಸ್ ಜತೆ ಸಭೆ ನಡೆಸುತ್ತಿದ್ದಾರೆ.
ಏಕಾಂಗಿ ಪ್ರತಿಭಟನೆ: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ಶಾ. ಮುರುಳಿ ಏಕಾಂಗಿ ಪ್ರತಿಭಟನೆ ನಡೆಸಿದರು.
ವ್ಯಕ್ತಿಯಿಂದ ಏಕಾಂಗಿ ಪ್ರತಿಭಟನೆ! ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಹಾಗೂ ತನಿಖಾಧಿಕಾರಿ ಕಳಸದ್ ಮನವೊಲಿಕೆ ಮಾಡಲು ಪ್ರಯತ್ನಿಸಿದರೂ ಕೂಡ ಬಗ್ಗದೇ ಡಿಎಸ್ ಕೊಠಡಿಯ ಮುಂಭಾದ ಮೆಟ್ಟಿಲಿನ ಬಳಿಯೇ ಮಲಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಪಾಠ ಕಲಿಸಿದ ಆಕ್ಸಿಜನ್ ದುರಂತ: ಈಗಲಾದರೂ ಬದಲಾಗಬೇಕಿದೆ ಆಸ್ಪತ್ರೆ ಅವ್ಯವಸ್ಥೆ!