ಕರ್ನಾಟಕ

karnataka

ETV Bharat / state

ಚಾಮರಾಜನಗರ: ಪತ್ನಿ ಕೊಲೆಗೈದ ಪತಿ, 10 ತಿಂಗಳ ಮಗು ಅನಾಥ - ತಮಿಳುನಾಡು ಮೂಲ

ಚಾಮರಾಜನಗರದಲ್ಲಿ ದಂಪತಿಯ ನಡುವಿನ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

couple quarrel ended in the murder of the wife
ದಂಪತಿ ಕಲಹ ಪತ್ನಿ‌ ಕೊಲೆಯಲ್ಲಿ ಅಂತ್ಯ

By ETV Bharat Karnataka Team

Published : Oct 22, 2023, 7:24 PM IST

ಚಾಮರಾಜನಗರ:ಪತಿ ತನ್ನ ಪತ್ನಿಯನ್ನು ಹತ್ಯೆಗೈದ ಘಟನೆ ಚಾಮರಾಜನಗರ ತಾಲೂಕಿನ ಮಂಗಲ‌ಹೊಸೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಧಿಕಾ (22) ಕೊಲೆಯಾದವರು. ಕಾರ್ತಿಕ್ ಆರೋಪಿ. ಇಬ್ಬರೂ ತಮಿಳುನಾಡಿನಿಂದ ಬಂದು ಜಮೀನು ಗುತ್ತಿಗೆ ಪಡೆದು ಹೂವಿನ ಕೃಷಿ ಮಾಡುತ್ತಿದ್ದರು.

ಶನಿವಾರ ತಡರಾತ್ರಿ ಗಲಾಟೆ ನಡೆದಿದೆ. ಈ ಗಲಾಟೆ ತಾರಕಕ್ಕೇರುತ್ತಿದ್ದಂತೆ ರಾಧಿಕಾ ಅವರು ಕಾರ್ತಿಕ್‌ಗೆ ಮನೆ ಬಿಟ್ಟು ಹೋಗು ಎಂದಿದ್ದಾರೆ. ಆಗ ಆತ, ಜಮೀನು ನನ್ನ‌ ಹೆಸರಲ್ಲಿದೆ. ಮಗು ಬಿಟ್ಟು ನೀನು ಹೋಗು ಎಂದಿದ್ದಾರೆ. ಇದೇ ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಕಾರ್ತಿಕ್ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದು, ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದಂಪತಿಗೆ 10 ತಿಂಗಳ ಮಗುವಿದೆ. ಮೃತಳ ತಾಯಿ ಇಲ್ಲವೇ ಸಹೋದರಿ ಆಶ್ರಯಕ್ಕೆ ಮಗುವನ್ನು ಕೊಡಬೇಕಿಗಿದೆ. ಸಾವಿಗೀಡಾದ ಮಹಿಳೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತೇಮರಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಹಾಗೂ ಮಗ ಸೇರಿ ಕೊಲೆಗೈದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕು ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಪುರದೊಡ್ಡಿ ಗ್ರಾಮದಲ್ಲಿ ಘಟನೆ ಜರುಗಿದೆ. ಉಮೇಶ್ (50) ಕೊಲೆಗೀಡಾದವ. ಆರೋಪಿಗಳಾದ ಸವಿತಾ ಹಾಗೂ ಆಕೆಯ ಮಗ ಉಮೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂಓದಿ:ಭೀಮಾ ತೀರದಲ್ಲಿ ದ್ವೇಷಕ್ಕಾಗಿ ಕೊಲೆಗೈದ ಆರೋಪಿಗಳ ಬಂಧನ

ABOUT THE AUTHOR

...view details