ಕರ್ನಾಟಕ

karnataka

By

Published : Apr 18, 2023, 1:08 PM IST

Updated : Apr 18, 2023, 3:37 PM IST

ETV Bharat / state

ಹನೂರು: ಚುನಾವಣಾ ತರಬೇತಿ ವೇಳೆ‌ ಹೃದಯಾಘಾತದಿಂದ ವ್ಯಕ್ತಿ ಸಾವು

ಹನೂರು ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

cnr
ಚಾಮರಾಜನಗರ

ಚಾಮರಾಜನಗರ: ಚುನಾವಣಾ ತರಬೇತಿಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರಲ್ಲಿ ನಡೆದಿದೆ. ಹನೂರು ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ಜಗದೀಶ್(40) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹನೂರು ಪಟ್ಟಣದ ವಿವೇಕನಂದಾ ಶಾಲೆಯಲ್ಲಿ ಮಂಗಳವಾರ ಎಆರ್​​​ಒ ಹಾಗೂ ಪಿಆರ್​​​ಒಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿ ಆರಂಭವಾಗುತ್ತಿದ್ದಂತೆ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಜಗದೀಶ್​ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ:ಗ್ಯಾಸ್ ಫಿಲ್ಲಿಂಗ್ ವೇಳೆ ಸಿಲಿಂಡರ್​ ಸ್ಫೋಟ.. ಎರಡು ಅಂಗಡಿ ನಾಶ, ಓರ್ವನ ಸ್ಥಿತಿ ಗಂಭೀರ

ಭದ್ರತಾ ಚೀಟಿ ಇಲ್ಲದ ಮದ್ಯ ವಶ: ಯಾವುದೇ ಭದ್ರತಾ ಚೀಟಿ ಇಲ್ಲದ‌ 9 ಸಾವಿರ ಲೀ. ಬಿಯರ್​ನ್ನು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೊಗೆ ನೆಲಮಂಗಲದ ಯುನೈಟೆಡ್ ಬ್ರಿವರಿಸ್​ ಪ್ರೈ.ಲಿ.ನಿಂದ ಸರಬರಾಜಾಗಿದ್ದ 1,150ರ ರಟ್ಟಿನ ಪೆಟ್ಟಿಗೆಗಳಲ್ಲಿ 7 ರಟ್ಟಿನ ಪೆಟ್ಟಿಗೆಗಳ ಮೇಲೆ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು 9,012 ಲೀ ಬಿಯರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಬ್ರಿವರಿಸ್ ಸನ್ನದುದಾರರು ಹಾಗೂ ಚಾಲಕರ ಮೇಲೆ ಅಬಕಾರಿ ಇಲಾಖೆ ಮೊಕದ್ದಮೆ ದಾಖಲಿಸಿದೆ. ಇನ್ನು ವಶಪಡಿಸಿಕೊಂಡ ಮದ್ಯದ ಮೌಲ್ಯ 14,65,015 ರೂ. ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಮತ್ತೆ ಬಾಲಕ ಮನೆಗೆ:ಮನೆ ಬಿಟ್ಟು ಹೋಗಿದ್ದ ಬಾಲಕನೊಬ್ಬ ಪೊಲೀಸರ ನೆರವಿನಿಂದ ಮತ್ತೇ ಮನೆಗೆ ಮರಳಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಖಾಸಗಿ ಬಸ್ ಹತ್ತಿದ್ದ ಬಾಲಕ‌ ಅಳುತ್ತ ಕುಳಿತಿದ್ದರಿಂದ ಪೊಲೀಸರು ಬಾಲಕನನ್ನು ಕರೆತಂದು ಪೋಷಕರನ್ನು ಪತ್ತೆಹಚ್ಚಿ ಬಾಲಕನನ್ನು ಒಪ್ಪಿಸಿದ್ದಾರೆ. ಯಾವ ಕಾರಣಕ್ಕಾಗಿ ಬಾಲಕ ಮನೆ ಬಿಟ್ಟು ಬಂದಿದ್ದ ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ:ಬೆಂಗಳೂರಲ್ಲಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು

Last Updated : Apr 18, 2023, 3:37 PM IST

ABOUT THE AUTHOR

...view details