ಕೊಳ್ಳೇಗಾಲ: ಬಸ್ನಲ್ಲಿ ವಾಂತಿ ಮಾಡಲು ಮುಂದಾದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪೊನ್ನಾಚಿ ಕ್ರಾಸ್ ಬಳಿ ನಡೆದಿದೆ.
ಮೈಸೂರಿನ ಅಶೋಕ ಪುರಂ ನಿವಾಸಿ ಉಮೇಶ್(61) ಎಂಬುವವರು ಸಾವನ್ನಪ್ಪಿದ ವ್ಯಕ್ತಿ. ಇವರು ಪಶು ಸಂಗೋಪನಾ ಇಲಾಖೆಯ ನಿವೃತ್ತ ನೌಕರರಾಗಿದ್ದಾರೆ. ಎಂದಿನಂತೆ ಅಮಾವಾಸ್ಯೆಯ ಪೂಜೆಗೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರಿಗೆ ಬಸ್ನಲ್ಲಿ ತೆರಳುವಾಗ ಪೊನ್ನಚ್ಚಿ ಕ್ರಾಸ್ ಬಳಿ ವಾಂತಿ ಬಂದಂತಾಗಿದೆ ಎಂದು ಬಸ್ ಬಾಗಿಲ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಚಲಿಸುತ್ತಿದ್ದ ಬಸ್‌ನ ಬಾಗಿಲು ಕಳಚಿಕೊಂಡಿದ್ದು ಉಮೇಶ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.