ಕರ್ನಾಟಕ

karnataka

ETV Bharat / state

ಚಾಮರಾಜನಗರ: ಪೊರಕೆ ಕಡ್ಡಿ ಕೀಳಲು ಹೋದಾಗ ಆನೆ ದಾಳಿ; ತಂದೆ ಬಲಿ, ಮಗ ಪಾರು - ಈಟಿವಿ ಭಾರತ ಕನ್ನಡ

ಪೊರಕೆ ಕಡ್ಡಿ ಕೀಳಲು ತೆರಳಿದ್ದ ವೇಳೆ ಆನೆ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಆನೆ ದಾಳಿಗೆ ವ್ಯಕ್ತಿ ಸಾವು
ಆನೆ ದಾಳಿಗೆ ವ್ಯಕ್ತಿ ಸಾವು

By

Published : Jul 10, 2023, 10:41 AM IST

ಚಾಮರಾಜನಗರ: ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಪಿ.ಜಿ‌. ಪಾಳ್ಯ ಸಮೀಪ ಆಲದಕೆರೆ ಕಾಡಿನಲ್ಲಿ ಭಾನುವಾರ ಸಂಜೆ ನಡೆದಿದೆ. ಪಿ‌.ಜಿ‌‌‌. ಪಾಳ್ಯ ಸಮೀಪದ ಮಾಳಿಗನತ್ತ ಗ್ರಾಮದ ಪ್ರಭುಸ್ವಾಮಿ (55) ಮೃತರು. ಮಲೆಮಹದೇಶ್ವರ ವನ್ಯಜೀವಿಧಾಮ ಪಿ.ಜಿ. ಪಾಳ್ಯ ಅರಣ್ಯ ವಲಯಕ್ಕೆ ಸೇರಿದ ಆಲದಕೆರೆ ಬಯಲು ಅರಣ್ಯ ಪ್ರದೇಶಕ್ಕೆ ಪ್ರಭುಸ್ವಾಮಿ ಹಾಗೂ ಮಗ ಚಂದ್ರು ಇಬ್ಬರೂ ಪೊರಕೆ ಕಡ್ಡಿ ಕೀಳಲು ತೆರಳಿದ್ದರು. ಅಪ್ಪ ಒಂದು ಭಾಗದಲ್ಲಿ ಮಗ ಮತ್ತೊಂದು ಭಾಗದಲ್ಲಿ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ. ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಮಗನಿಂದ ಘಟನೆ ಬೆಳಕಿಗೆ ಬಂದಿದೆ‌. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

ರಾಮನಗರದಲ್ಲೂ ಇಂಥದ್ದೇ ಘಟನೆ:ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯಲ್ಲಿ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾ ನಗರದಲ್ಲಿ ಆನೆ ದಾಳಿಗೆ ಓರ್ವ ಮಹಿಳೆಯ ಸಾವನ್ನಪ್ಪಿದ್ದರು. ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಆನೆ ದಾಳಿ ಮಾಡಿತ್ತು. ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಜಯಮ್ಮ ಎಂಬವರು ಘಟನೆಯಲ್ಲಿ ಮೃತಪಟ್ಟರೆ, ವೆಂಕಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದರು.

ರೈತನ ಮೇಲೆ ಆನೆ ದಾಳಿ:ರಾಮನಗರದಲ್ಲಿ ಮಾವಿನತೋಟ ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ ನಡೆಸಿತ್ತು. ರೈತ ಸ್ಥಳದಲ್ಲೇ ಅಸುನೀಗಿದ್ದ. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಘಟನೆ ವರದಿಯಾಗಿತ್ತು. ಕನಕಪುರ ಮೂಲದ ವೀರಭದ್ರಯ್ಯ ಎಂಬ ರೈತ ಮೃತಪಟ್ಟಿದ್ದರು. ವೀರಭದ್ರಯ್ಯ ಮಾವಿನ ತೋಟ ಕಾಯುತ್ತಿದ್ದರು. ಬೆಳಗಿನ ಜಾವ ತೋಟಕ್ಕೆ ನುಗ್ಗಿದ್ದ ಆನೆ ದಾಳಿ ನಡೆಸಿದೆ. ಇದಕ್ಕೆ ಹತ್ತಿರದ ಕಬ್ಬಾಳು ಗ್ರಾಮದಲ್ಲೂ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದರು.

ಆನೆ ದಾಳಿಗೆ ಸಿಆರ್​ಪಿಎಫ್​ ಯೋಧ ಸಾವು:ಇತ್ತೀಚೆಗೆ ಬನ್ನೇರುಘಟ್ಟದ ಸಿಆರ್‌ಪಿಎಫ್ ಡಾಗ್ ಸ್ಕ್ವಾಡ್ ಕೇಂದ್ರದ ಬಳಿ ಯೋಧನ ಮೇಲೆ ಆನೆ ದಾಳಿ ಮಾಡಿದ್ದು, ಅವರು ಮೃತಪಟ್ಟಿದ್ದರು. ಹೆಚ್.ಎನ್.ಸಿಂಗ್ ಬೆಳಗ್ಗೆ ಸೇನಾ ಕೇಂದ್ರದಲ್ಲಿ ವಾಕಿಂಗ್ ಮತ್ತು ಜಾಗಿಂಗ್​ನಲ್ಲಿ ತೊಡಗಿದ್ದಾಗ ಆನೆ ದಾಳಿ ಮಾಡಿತ್ತು. ಯೋಧ ಗಾಯಗೊಂಡು ಬಿದ್ದಿರುವುದನ್ನು ಸಹೋದ್ಯೋಗಿಗಳು ಗಮನಿಸಿ ಕೂಡಲೇ ತಲಘಟ್ಟಪುರ ಪೊಲೀಸರು ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯಯೇ ಸಾವನ್ನಪ್ಪಿದ್ದರು.

ಇದನ್ನು ಓದಿ:ರಾಮನಗರದಲ್ಲಿ ಮಹಿಳೆಯರಿಬ್ಬರ ಮೇಲೆ ಕಾಡಾನೆ ದಾಳಿ: ಒಬ್ಬರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ABOUT THE AUTHOR

...view details