ಕರ್ನಾಟಕ

karnataka

ETV Bharat / state

ಚಾಮರಾಜನಗರ: ಹಾಡಹಗಲೇ ಕಾಡಾನೆ ದಾಳಿಗೆ ಮಾನಸಿಕ ಅಸ್ವಸ್ಥ ಬಲಿ - man dead by elephant attack

ಚಾಮರಾಜನಗರದಲ್ಲಿ ಕಾಡಾನೆ ದಾಳಿಯಿಂದ ಮಾನಸಿಕ ಅಸ್ವಸ್ಥನೊಬ್ಬ ಸಾವನ್ನಪ್ಪಿದ್ದಾನೆ.

man died in chamarajnagar
ಮಾನಸಿಕ ಅಸ್ವಸ್ಥ ಬಲಿ

By

Published : May 5, 2020, 4:29 PM IST

ಚಾಮರಾಜನಗರ: ಕಾಡಾನೆಯೊಂದು ದಾಳಿ ಮಾಡಿ ಮಾನಸಿಕ ಅಸ್ವಸ್ಥನೊಬ್ಬನನ್ನು ಬಲಿ ಪಡೆದಿರುವ ಘಟನೆ ಚಾಮರಾಜನಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-209ರ ದೊಡ್ಡ ಮೂಡಲಹಳ್ಳಿ ಬಳಿ ನಡೆದಿದೆ.

ಕಳೆದ ಒಂದು ತಿಂಗಳಿನಿಂದಲೂ ಈ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಾನಸಿಕ ಅಸ್ವಸ್ಥ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದ್ದು, ರಸ್ತೆ ಬದಿ ನಿಂತಿದ್ದ ಮಾನಸಿಕ ಅಸ್ವಸ್ಥನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿದೆ.

ಮಾನಸಿಕ ಅಸ್ವಸ್ಥ ಬಲಿ

ಮಾನಸಿಕ ಅಸ್ವಸ್ಥನ ಗುರುತು ಪತ್ತೆ ಹಚ್ಚಲು ಚಾಮರಾಜನಗರದ ಪೂರ್ವ ಠಾಣೆ ಪೊಲೀಸರು ಮುಂದಾಗಿದ್ದಾರೆ. ಬಿಆರ್​ಟಿ ಹುಲಿ ಯೋಜನೆ ಪ್ರದೇಶದ ಪುಣಜನೂರು ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details