ಕರ್ನಾಟಕ

karnataka

ಪಿಎಂಒ ಹೆಸರಲ್ಲಿ ಚಾಮರಾಜನಗರ ಡಿಸಿಗೆ ಕರೆ.. ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯಕ್ಕೆ ಬೇಡಿಕೆ

ಕಳೆದ 27 ರಂದು ವ್ಯಕ್ತಿಯೋರ್ವ ತನ್ನನ್ನು ರಾವ್ ಎಂದು ಪರಿಚಯಿಸಿಕೊಂಡು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದಾನೆ. ಜು. 2 ರಂದು ಬಿಳಿಗಿರಿರಂಗನಾಥ ದೇವಾಲಯಕ್ಕೆ ಬರಲಿದ್ದು, ತನಗೆ ಜಂಗಲ್ ಲಾಡ್ಜ್ ರೆಸಾರ್ಟ್​ ಕೊಠಡಿ, ದೊಡ್ಡಸಂಪಿಗೆ ಮರವನ್ನು ವೀಕ್ಷಿಸಲು ಸೌಲಭ್ಯ ಕಲ್ಪಿಸುವಂತೆ ಕೇಳಿಕೊಂಡಿದ್ದಾನೆ.

By

Published : Jul 3, 2022, 9:16 PM IST

Published : Jul 3, 2022, 9:16 PM IST

ಡಿಸಿ ಚಾರುಲತಾ ಸೋಮಲ್
ಡಿಸಿ ಚಾರುಲತಾ ಸೋಮಲ್

ಚಾಮರಾಜನಗರ:ತಾನು ಪ್ರಧಾನಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದು, ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗೆ ವ್ಯಕ್ತಿಯೋರ್ವ ಕರೆ ಮತ್ತು ವಾಟ್ಸಾಪ್ ಸಂದೇಶ ಕಳುಹಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಪ್ರಥಮ ವರ್ತಮಾನ ವರದಿ

ಹೌದು, ಕಳೆದ ಜೂನ್​ 27 ರಂದು ವ್ಯಕ್ತಿಯೋರ್ವ ತನ್ನನ್ನು ರಾವ್ ಎಂದು ಪರಿಚಯಿಸಿಕೊಂಡು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದಾನೆ. ಜು. 2 ರಂದು ಬಿಳಿಗಿರಿರಂಗನಾಥ ದೇವಾಲಯಕ್ಕೆ ಬರಲಿದ್ದು, ತನಗೆ ಜಂಗಲ್ ಲಾಡ್ಜ್ ರೆಸಾರ್ಟ್​ ಕೊಠಡಿ, ದೊಡ್ಡಸಂಪಿಗೆ ಮರವನ್ನು ವೀಕ್ಷಿಸಲು ಸೌಲಭ್ಯ ಕಲ್ಪಿಸುವಂತೆ ಕೇಳಿಕೊಂಡಿದ್ದಾನೆ.

ಪ್ರಥಮ ವರ್ತಮಾನ ವರದಿ

ಗುಜರಾತ್​ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಪ್ರಧಾನಿ ಕಾರ್ಯಾಲಯದಲ್ಲಿದ್ದು, ಗೌಪ್ಯತೆ ಕಾಪಾಡಬೇಕಿರುವುದರಿಂದ ಹೆಚ್ಚೇನೂ ಹೇಳಲಾಗಲ್ಲ ಎಂದು ಕರೆ ಮತ್ತು ವಾಟ್ಸಾಪ್ ಸಂದೇಶದಲ್ಲಿ ಹೇಳಿದ್ದಾನಂತೆ. ಅನುಮಾನಗೊಂಡ ಡಿಸಿ ಪರಿಶೀಲಿಸಿದಾಗ ಆತ ನಕಲಿ ಸಿಬ್ಬಂದಿ ಎಂದು ಗೊತ್ತಾಗಿ ಶನಿವಾರ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ಆರೋಪಿಯ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಥಮ ವರ್ತಮಾನ ವರದಿ

ಓದಿ:ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್.. ಕಿಲೋಮೀಟರ್​ಗಟ್ಟಲೇ ನಿಂತ ವಾಹನಗಳು

ABOUT THE AUTHOR

...view details