ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.
ಬರೋಬ್ಬರಿ 15 ತಾಸುಗಳ ಎಣಿಕೆ ನಡೆದಿದ್ದು, 2,51,61,247 ರೂ.ಸಂಗ್ರಹವಾಗುವ ಮೂಲಕ ಇಲ್ಲಿವರೆಗಿನ ಅತಿಹೆಚ್ಚು ಆದಾಯದ ದಾಖಲೆಯನ್ನು 2020ರ ಶಿವರಾತ್ರಿ ಬರೆದಿದೆ. ಕಳೆದ ವರ್ಷದ ಶಿವರಾತ್ರಿ ವೇಳೆ 2.13 ಕೋಟಿ ರೂ.ಸಂಗ್ರಹವಾಗಿದ್ದೇ ಅತೀ ಹೆಚ್ಚಿನ ಮೊತ್ತವಾಗಿತ್ತು. ಇದರೊಟ್ಟಿಗೆ 50 ಗ್ರಾಂ ಚಿನ್ನ, 2.40 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾಯಕಾರನಿಗೆ ಅರ್ಪಿಸಿದ್ದಾರೆ.