ಚಾಮರಾಜನಗರ:ಅಜ್ಜಿ ಜೊತೆ ದೇವರ ದರ್ಶನಕ್ಕೆ ಬಂದಿದ್ದ 4 ವರ್ಷದ ಬಾಲಕನೋರ್ವ ಕಾರಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ನೆಲಮಂಗಲ ಮೂಲದ ಧೃವನಂದನ್(4) ಮೃತ ಬಾಲಕ.
ಅಜ್ಜಿ ಜೊತೆ ದೇವರ ದರ್ಶನಕ್ಕೆಂದು ಬಂದಿದ್ದ ಬಾಲಕ ಬೆಟ್ಟದ ಜಡೆಕಲ್ಲು ಸಮೀಪ ದಿಢೀರನೇ ಅಜ್ಜಿ ಕೈ ಬಿಟ್ಟು ಓಡಿದ್ದಾನೆ. ಈ ವೇಳೆ ಯಾತ್ರಿಕರೊಬ್ಬರ ಕಾರಿನ ಹಿಂಬದಿ ಚಕ್ರಕ್ಕೆ ಬಾಲಕ ಸಿಲುಕಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.