ಕರ್ನಾಟಕ

karnataka

ETV Bharat / state

ಇಂದಿನಿಂದ ಮಾದಪ್ಪನ ಬೆಟ್ಟದಲ್ಲಿ ವಾಸ್ತವ್ಯಕ್ಕೆ ಅವಕಾಶ: ಎಲ್ಲಾ ಸೇವೆಗಳು ಲಭ್ಯ - ಮಲೆಮಹದೇಶ್ವರ ಬೆಟ್ಟ ಭಕ್ತರಿಗೆ ಮುಕ್ತ ಸುದ್ದಿ

ಕೊರೊನಾ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಹೇರಲಾಗಿದ್ದ ನಿರ್ಬಂಧಗಳು ಇಂದಿನಿಂದ ತೆರವುಗೊಂಡಿದ್ದು,ಪೂಜಾ ಕೈಂಕರ್ಯ, ಉತ್ಸವಗಳು ಸೇರಿದಂತೆ ಭಕ್ತರ ವಾಸ್ತವ್ಯಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ.

male mahadeshwar hills  free from today
ಚಾಮರಾಜನಗರ

By

Published : Nov 1, 2020, 4:16 PM IST

ಚಾಮರಾಜನಗರ:ಕೊರೊನಾ ಭೀತಿಯಿಂದ ಕಳೆದ 7 ತಿಂಗಳುಗಳಿಂದ ವಾಸ್ತವ್ಯಕ್ಕೆ ಹೇರಿದ್ದ ನಿರ್ಬಂಧ ಇಂದು ತೆರವಾಗಿದ್ದು ಭಕ್ತಾದಿಗಳು ಬೆಟ್ಟದಲ್ಲೇ ಇಂದಿನಿಂದ ವಾಸ್ತವ್ಯ ಹೂಡಬಹುದಾಗಿದೆ.

ಚಾಮರಾಜನಗರ
ಇದರೊಟ್ಟಿಗೆ ದೇವಾಲಯದಲ್ಲಿ ಇಂದಿನಿಂದ ಎಲ್ಲ ಸೇವೆಗಳನ್ನು ಭಕ್ತರು ನೆರವೇರಿಸಬಹುದಾಗಿದೆ‌. ಬೆಳಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ, ಎಲ್ಲ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳು ಎಲ್ಲವೂ ಮುಕ್ತವಾಗಿರಲಿದೆ ಎಂದು ಈಟಿವಿ ಭಾರತಕ್ಕೆ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.ಮುಡಿಸೇವೆ, ಆನ್​ಲೈನ್ ಬುಕ್ಕಿಂಗ್ ಕೂಡ ಪುನಾರಂಭವಾಗಿದ್ದು, ಇನ್ನು ಮೂರು ದಿನಗಳಲ್ಲಿ ಸಹಾಯವಾಣಿಯೂ ಕಾರ್ಯಾರಂಭ ಮಾಡಲಿದೆ. 12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ದೇವಾಲಯದ ಒಳಗೆ‌ ಪ್ರವೇಶ ಇರುವುದಿಲ್ಲ. ರಂಗಮಂದಿರ, ದೇವಾಲಯದ ಮುಂದೆ, ಅಥವಾ ಇನ್ನಾವುದೇ ಜಾಗದಲ್ಲಿ ರಾತ್ರಿ ಭಕ್ತಾದಿಗಳು ತಂಗುವುದು ನಿಷೇಧಿಸಿದೆ ಎಂದು ಅವರು ಹೇಳಿದ್ದಾರೆ.

For All Latest Updates

ABOUT THE AUTHOR

...view details