ಇನ್ನೆರಡು ದಿನದಲ್ಲಿ ಆನ್ಲೈನ್ ಮೂಲಕ ಮಲೆ ಮಹದೇಶ್ವರನ ದರ್ಶನ - Malemahadeshwara Temple
ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವಾಲಯದಲ್ಲಿನ ಆನ್ ಲೈನ್ ಮೂಲಕ ದರ್ಶನಕ್ಕೆ ತಯಾರಿ ನಡೆಸಲಾಗಿದೆ.
ಆನ್ಲೈನ್ ಮೂಲಕ ಮಲೆ ಮಹದೇಶ್ವರನ ದರ್ಶನ
ಚಾಮರಾಜನಗರ: ಎಲ್ಲವೂ ಸರಿಯಾದರೆ, ಇನ್ನೆರೆಡು ದಿನಗಳಲ್ಲಿ ಆನ್ ಲೈನ್ ಮೂಲಕ ಏಳುಮಲೆ ಒಡೆಯ ಮಲೆ ಮಹದೇಶ್ವರನ ದರ್ಶನ ಪ್ರಾರಂಭವಾಗಲಿದೆ.
ತಾಂತ್ರಿಕವಾಗಿ ಎಲ್ಲ ಸರಿ ಹೋಗಿದ್ದು, ಮಲೆಮಹದೇಶ್ವರ ಬೆಟ್ಟ ಅಧಿಕೃತ ವೆಬ್ ಸೈಟ್ನಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಆನ್ ಲೈನ್ ಮೂಲಕ ದರ್ಶನ ಪಡೆಯಬಹುದಾಗಿದೆ. ಬೆಳಗಿನ ಅಭಿಷೇಕ ಸಮಯ 4.30- 6 ಗಂಟೆ ಮತ್ತು ಸಂಜೆ 6.45 ರಿಂದ 8 ರ ವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಾಮಿಯ ಪೂಜೆಯ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.
ಅಲ್ಲದೇ ಆನ್ ಲೈನ್ ಮೂಲಕವೇ ಭಕ್ತಾದಿಗಳು ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು, ವಿಶೇಷವಾಗಿ ರಾಜ್ಯದ ಭಕ್ತಾದಿಗಳು ಸೇವೆ ಮಾಡಿಸಿದರೆ ಅಂಚೆ ಮೂಲಕ ಕಲ್ಲು ಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ಕಳುಹಿಸುತ್ತೇವೆ. ಇದು ನಮ್ಮ ರಾಜ್ಯದ ಭಕ್ತಾದಿಗಳಿಗೆ ಮಾತ್ರ. ಬೇರೆ ರಾಜ್ಯದ ಭಕ್ತರಿಗೆ ಪ್ರಸಾದ ಕಳುಹಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.