ಕರ್ನಾಟಕ

karnataka

ETV Bharat / state

ಕೋವಿಡ್​ ಭೀತಿ : ಭಕ್ತರಿಗಿಲ್ಲ ಮಾದಪ್ಪನ ದರ್ಶನ, ಬಿಳಿಗಿರಿ ರಂಗನ ಜಾತ್ರೆಗೂ ಬ್ರೇಕ್ - ಭಕ್ತರಿಗಿಲ್ಲ ಮಾದಪ್ಪನ ದರ್ಶನ

ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದಲ್ಲಿ ಪ್ರತಿ ಸಂಕ್ರಾಂತಿ ಬಳಿಕ ನಡೆಯುವ ಚಿಕ್ಕಜಾತ್ರೆಯನ್ನ ರದ್ದು ಪಡಿಸಲಾಗಿದೆ‌‌. ಜೊತೆಗೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಸಹ ಕೊರೊನಾ ಕಾರಣದಿಂದಾಗಿ ರದ್ದಾಗಿದೆ. ಸರಳವಾಗಿ ಸಾಂಪ್ರದಾಯಿಕ ಪೂಜೆ ನಡೆಯಲಿದೆ..

ಮಾದಪ್ಪ, male mahadeshwara temple
ಮಾದಪ್ಪ

By

Published : Jan 7, 2022, 12:12 PM IST

ಚಾಮರಾಜನಗರ: ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ ಇಂದಿನಿಂದ ವೀಕೆಂಡ್​ ಕರ್ಫ್ಯೂ ಜಾರಿಯಾಗುವುದರಿಂದ ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಕುರಿತು ಪ್ರಾಧಿಕಾರ ಹೇಳಿಕೆ ಬಿಡುಗಡೆ ಮಾಡಿದೆ. ಇಂದು ಸಂಜೆ 5ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದೇಗುಲದಲ್ಲಿ ಅರ್ಚಕರು ನಡೆಸುವ ನಿತ್ಯದ ಪೂಜಾ ಕೈಂಕರ್ಯ ಬಿಟ್ಟರೆ ಊಳಿದೆಲ್ಲಾ ಸೇವೆಗಳು ರದ್ದಾಗಿವೆ. ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿದ್ದರೂ ವಸತಿ, ದೇಗುಲ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದೆ.

ಜಾತ್ರೆಗಳು ರದ್ದು:ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದಲ್ಲಿ ಪ್ರತಿ ಸಂಕ್ರಾಂತಿ ಬಳಿಕ ನಡೆಯುವ ಚಿಕ್ಕಜಾತ್ರೆಯನ್ನ ರದ್ದು ಪಡಿಸಲಾಗಿದೆ‌‌. ಜೊತೆಗೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಸಹ ಕೊರೊನಾ ಕಾರಣದಿಂದಾಗಿ ರದ್ದಾಗಿದೆ. ಸರಳವಾಗಿ ಸಾಂಪ್ರದಾಯಿಕ ಪೂಜೆ ನಡೆಯಲಿದೆ.

ಓದಿ:ಜೋಡಿ ಕೊಲೆ ಪ್ರಕರಣ: ಪೊಲೀಸರ ಮೇಲೆ ದಾಳಿ ಮಾಡಿದ್ದ ಆರೋಪಿಗಳ ಎನ್​ಕೌಂಟರ್​​​​

ABOUT THE AUTHOR

...view details