ಚಾಮರಾಜನಗರ: ಕಳೆದ ನಾಲ್ಕು ದಿನಗಳ ಹಿಂದೆ ನಿತ್ರಾಣದಿಂದ ಓಡಾಡುತ್ತಿದ್ದ ಗಂಡಾನೆಯೊಂದು ಇಂದು ಮೃತಪಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ನಡೆದಿದೆ.
ಮೃತ ಆನೆಯೂ 50-60 ವರ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಕಳೆದ 5 ದಿನಗಳ ಹಿಂದೆ ನಿತ್ರಾಣದಿಂದ ನಿಧಾನವಾಗಿ ನಡೆಯುತ್ತಿದ್ದನ್ನು ಇಲಾಖೆ ಸಿಬ್ಬಂದಿ ಗಮನಿಸಿದ್ದರು.