ಚಾಮರಾಜನಗರ:ಪ್ರಸಿದ್ಧ ಶಿವನ ದೇಗುಲವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ.... ಮಾಯ್ಕಾರನ ಭಕ್ತಿರಸದಲ್ಲಿ ಮಿಂದೆದ್ದ ಭಕ್ತರು - ಮಾದಪ್ಪ ದೇವರ ಜಾತ್ರೆ
ಪ್ರಸಿದ್ಧ ಶಿವನ ದೇಗುಲವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಮಾದಪ್ಪನ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ
10.45 ರ ಶುಭ ಲಗ್ನದಲ್ಲಿ ಜರುಗಿದ ಬ್ರಹ್ಮ ರಥೋತ್ಸವದಲ್ಲಿ ರಾಜ್ಯ-ಹೊರರಾಜ್ಯದಿಂದ ಬಂದಿದ್ದ ಅಸಂಖ್ಯಾತ ಭಕ್ತಗಣ ಮಾದಪ್ಪನ ಘೋಷಣೆಗಳನ್ನು ಮೊಳಗಿಸಿ ಮಾಯಕಾರನ ಭಕ್ತಿ ರಸದಲ್ಲಿ ಮಿಂದೆದ್ದರು . ಇನ್ನು, ರಥದ ಜೊತೆಯಲ್ಲಿ ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನಗಳು,ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ಕಳೆದ 5 ದಿನಗಳಿಂದ ನಡೆದ ಶಿವರಾತ್ರಿ ಸಂಭ್ರಮಕ್ಕೆ ಇಂದು ರಾತ್ರಿ ಜರುಗುವ ತೆಪ್ಪೋತ್ಸವದ ಮೂಲಕ ತೆರೆ ಬೀಳಲಿದೆ.