ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದ ಅಣಗಳ್ಳಿಯಲ್ಲಿ ಮಹಿಷ ದಸರಾ ಆಚರಣೆ - Mahisha Dussehra ritual in Kollegal

ಕೊಳ್ಳೇಗಾಲ ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಹಳ್ಳಿ ದಸರಾ - ಮಹಿಷ ಹಬ್ಬವನ್ನು ಮಹಿಷಾಸುರ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು.

ಮಹಿಷ ದಸರಾ ಆಚರಣೆ
ಮಹಿಷ ದಸರಾ ಆಚರಣೆ

By

Published : Oct 26, 2020, 4:26 PM IST

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಮಹಿಷ ದಸರಾವನ್ನು ಗ್ರಾಮಸ್ಥರು ಆಚರಿಸಿ ಮಹಿಷಾಸುರ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಿ ಗಮನ ಸೆಳೆದರು.

ಗ್ರಾಮದ ಯಜಮಾನರು ಹಾಗೂ ರೈತಮುಖಂಡ ಅಣಗಳ್ಳಿ ಬಸವರಾಜು ನೇತೃತ್ವದಲ್ಲಿ ಹಳ್ಳಿ ದಸರಾ - ಮಹಿಷ ಹಬ್ಬವನ್ನು ಆಚರಿಸಿದರು. ಟ್ರ್ಯಾಕ್ಟರ್​​ ಮೂಲಕ ಮೂವರ ಭಾವಚಿತ್ರಗಳನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮಾಡಿ ಉತ್ಸವ ಆಚರಿಸಿದರು.

ಮಹಿಷ ದಸರಾ ಆಚರಣೆ

ಪರಂಪರೆ ಉಳಿಸಲು ಹಬ್ಬ: ರೈತ ಮುಖಂಡ ಅಣಗಳ್ಳಿ ಬಸವರಾಜು ಮಹಿಷ ಹಬ್ಬ ಕುರಿತು ಮಾತನಾಡಿ, ಮೈಸೂರಿನಲ್ಲಿ ದೊರೆ ಮಹಿಷ ನಮ್ಮ ರಾಜರಾಗಿದ್ದರು. ಆ ಕಾಲದಲ್ಲಿ ಜನಪರವಾಗಿ ಆಳ್ವಿಕೆ ನಡೆಸಿ ಜನರಿಗಾಗಿ ಪ್ರಾಣ ತೆತ್ತಿದ್ದಾರೆ. ರಾಜ್ಯಾದ್ಯಂತ ಮಹಿಷ ದಸರಾ ಆಚರಣೆಯಾಗಬೇಕಿದೆ ಎಂದರು.

ಹಿಂದಿನ ಚರಿತ್ರೆ, ಇತಿಹಾಸ ಮುಂದಿನ ಪೀಳಿಗೆಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಜಾತ್ಯತೀತವಾಗಿ, ರಾಜಕೀಯವಿಲ್ಲದೇ ಮಾಡಲಾಗಿದೆ. ನಮ್ಮ ಮೈಸೂರು ಪ್ರಾಂತ್ಯವನ್ನಾಳಿದ ಮಹಿಷ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶ ಇದಾಗಿದೆ. ನಾವು ಸ್ವತಂತ್ರ ಭಾರತದಲ್ಲಿದ್ದು, ಪೂಜಿಸುವುದು, ಮೆರವಣಿಗೆ ಮಾಡುವುದು ಅವರವರ ಆಯ್ಕೆಯಾಗಿದೆ. ಅದನ್ನು ಸ್ವತಂತ್ರವಾಗಿ ಬಿಡಬೇಕು ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details